ಭಾನುವಾರ, ಡಿಸೆಂಬರ್ 15, 2019
20 °C

‘ಸೈಮಾ’ ವೇದಿಕೆಯಲ್ಲಿ ಮಿಂಚಿದ ಕನ್ನಡದ ನಟಿಯರ ಉಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸೈಮಾ’ ವೇದಿಕೆಯಲ್ಲಿ ಮಿಂಚಿದ ಕನ್ನಡದ ನಟಿಯರ ಉಡುಗೆ

ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಸಮಾರಂಭದಲ್ಲಿ ಶಿವರಾಜ್‌ ಕುಮಾರ್‌, ರಾಧಿಕಾ ಚೇತನ್‌, ರಶ್ಮಿಕಾ ಮಂದಣ್ಣ, ರಕ್ಷಿತ್‌ ಶೆಟ್ಟಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಎಲ್ಲರಿಗೂ ಗೊತ್ತು  ಈ ಸಮಾರಂಭದಲ್ಲಿ ಭಾಗವಹಿಸಿದ್ದ ಕನ್ನಡದ ನಟಿಯರು ಹೊಸ ವಿನ್ಯಾಸದ ಗೌನ್‌ಗಳಲ್ಲಿ ಪೋಸ್‌ ಕೊಟ್ಟು ಮಿಂಚಿದ್ದರು.

ಬೇರೆ ಬೇರೆ ಪ್ರಶಸ್ತಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ನಟಿಯರಾದ ಮಾನ್ವಿತಾ, ಆಶಿಕಾ, ಶ್ರದ್ಧಾ ಶ್ರೀನಾಥ್‌, ರಾಧಿಕಾ ಚೇತನ್‌, ರಶ್ಮಿಕಾ ಮಂದಣ್ಣ ಸೇರಿದಂತೆ ಬೆಡಗಿಯರ ದೊಡ್ಡ ದಂಡೇ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಿಂಚಲು ತಿಂಗಳ ಹಿಂದೆಯೇ ತಯಾರಿ ನಡೆಸಿದ್ದರು. 

ಎರಡು ದಿನಗಳ ಈ ಸಮಾರಂಭದಲ್ಲಿ ಮಾನ್ವಿತಾ ಕಪ್ಪು ಬಣ್ಣದ ಗೌನ್‌ ಹಾಗೂ ಹಳದಿ– ಕಪ್ಪು ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದರು. ಗೌನ್‌ ತೋಳುಗಳು ನೆಲಕ್ಕೆ ಮುತ್ತಿಕ್ಕುತ್ತಿದ್ದವು. ಉದ್ದವಾದ ಸೀಳು ತೋಳುಗಳು ಇಡೀ ಉಡುಪಿಗೆ ಹೊಸ ಕಳೆಕೊಟ್ಟಿದ್ದವು. ಕೆನೆ ಬಣ್ಣದ ಬಟ್ಟೆ ಮೇಲೆ ಬೆಳ್ಳಿ ಚಿತ್ತಾರವಿದ್ದ ಗೌನ್‌ ಧರಿಸಿದ್ದ ಶ್ರದ್ಧಾ ಶ್ರೀನಾಥ್‌, ಕಪ್ಪು ಹಾಗೂ ಕೆಳಗೆ ಕೆಂಪು ಬಣ್ಣದ ಗೌನ್‌ ತೊಟ್ಟಿದ್ದ ನಟಿ ಆಶಿಕಾ ಎಲ್ಲರ ಗಮನ ಸೆಳೆದಿದ್ದರು.

ಮಾನ್ವಿತಾ ಹಾಗೂ ಶ್ರದ್ಧಾ ಶ್ರೀನಾಥ್‌ಗೆ ಗೌನ್‌ಗಳನ್ನು ವಿನ್ಯಾಸ ಮಾಡಿದವರು ಹೈದರಾಬಾದ್‌ನ ವಿನ್ಯಾಸಕಿ ಆಕಾಂಕ್ಷಾ ಕಪೂರ್‌. ಆಶಿಕಾ ಉಡುಪಿನ ವಿನ್ಯಾಸಕಿ ಅರುಂಧತಿ ಆಂಜನಪ್ಪ.

‌ಸಮಾರಂಭಕ್ಕೆ ದುಬೈಗೆ ಹಾರಿದ್ದ ನಟಿಯರು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಒಟ್ಟಾಗಿ ತೆರಳಿ ಮಸ್ತ್‌ ಎಂಜಾಯ್‌ ಮಾಡಿದ್ದಾರೆ. ಅಲ್ಲಿ ನಮ್ಮನ್ನು ರಾಜಾತಿಥ್ಯದಿಂದ ನೋಡಿಕೊಂಡರು ಎಂದು ಶ್ರದ್ಧಾ ಶ್ರೀನಾಥ್‌ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)