ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳಿಂದ ಅಪಾರ ಆಸ್ತಿ, ಜೀವ ಹಾನಿ: ಅಧ್ಯಯನ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ : ಸುಮಾರು 32 ವನ್ಯಜೀವಿಗಳು ಭಾರತದಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಜೀವ ಹಾನಿಗೆ ಕಾರಣವಾಗುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸರ್ಕಾರವು ಮಾನವ–ವನ್ಯಜೀವಿ ಸಂಘರ್ಷ ನಿರ್ವಹಣೆಯನ್ನು ಮತ್ತಷ್ಟು ಬಲಗೊಳಿಸುವ ಮೂಲಕ ಆಗುತ್ತಿರುವ ಹಾನಿಯನ್ನು ತಗ್ಗಿಸಬೇಕಿದೆ ಎಂದು ಅಧ್ಯಯನ ತಂಡ  ಸಲಹೆ ನೀಡಿದ್ದಾರೆ.
ಅಮೆರಿಕದ ವನ್ಯಜೀವಿ ಸಂರಕ್ಷಣಾ ಮಂಡಳಿಯ ವಿಜ್ಞಾನಿ ಕೃತಿ ಕಾರಂತ್ ಅವರೂ ಈ ಅಧ್ಯಯನ ತಂಡದಲ್ಲಿದ್ದರು.  ಹ್ಯೂಮನ್ ಡೈಮೆನ್ಷನ್ಸ್ ಆಫ್ ವೈಲ್ಡ್‌ಲೈಫ್ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಹೀಗಿತ್ತು ಅಧ್ಯಯನ

* 2011ರಿಂದ 2014ರ ಅವಧಿಯಲ್ಲಿ ಆದ ಹಾನಿ ಅಧ್ಯಯನ
*11 ವನ್ಯಜೀವಿ ಅರಣ್ಯ ಬಳಿಯ 2,855 ಹಳ್ಳಿಗಳ ವ್ಯಾಪ್ತಿ
* ಪಶ್ಚಿಮ, ಕೇಂದ್ರ ಹಾಗೂ ದಕ್ಷಿಣ ಭಾರತ ಒಳಗೊಂಡು ಅಧ್ಯಯನ
* 5,196 ಕುಟುಂಬಗಳು ವನ್ಯಜೀವಿ ಉಪಟಳ ತಡೆಗೆ ತೆಗೆದುಕೊಂಡ ಕ್ರಮಗಳ  ಅಧ್ಯಯನ ಮತ್ತು ವಿಶ್ಲೇಷಣೆ

ಅಧ್ಯಯನ ಕಂಡುಕೊಂಡ ಅಂಶ

71% - ಬೆಳೆ ನಷ್ಟ

17% - ಜಾನುವಾರು ಹಾನಿ

3% - ಮಾನವನಿಗೆ ಗಾಯ, ಸಾವು

ಕೃತಿ ಕಾರಂತ್ ಹೇಳುವುದೇನು

- ಮಾನವ–ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ತಂತ್ರಗಳ ಗುರುತಿಸುವಿಕೆ

-ಪ್ರಸ್ತುತ ಇರುವ ಪರಿಹಾರ ಕಾರ್ಯಕ್ರಮಗಳನ್ನು ಬಲಗೊಳಿಸುವುದು 
- ಸ್ಥಳೀಯ ಸಮುದಾಯಗಳು, ಸರ್ಕಾರಗಳು, ಸಂರಕ್ಷಕರನ್ನು ಒಳಗೊಂಡು ಎಲ್ಲರೊಂದಿಗೆ ಮುಕ್ತ ಮಾತುಕತೆ ನಡೆಸುವುದು ಅಗತ್ಯ

ನಿಯಂತ್ರಣ ಕ್ರಮಗಳು

- ಗ್ರಾಮೀಣ ಜನರು ವನ್ಯಜೀವಿ ಗಳಿಂದ ತಮ್ಮ ಬೆಳೆ, ಜಾನುವಾರು ಹಾಗೂ ಜೀವ ಹಾನಿ ತಡೆಗೆ 12 ಕ್ರಮಗಳನ್ನು ಅನುಸರಿಸುತ್ತಾರೆ
- ರಾತ್ರಿ ಗಸ್ತು, ಭಯ ಹುಟ್ಟಿಸುವ ಸಾಧನ ಬಳಕೆ, ಬೇಲಿ ನಿರ್ಮಾಣ–ಇವು ಸಾಮಾನ್ಯವಾಗಿ ಅನುಸರಿಸುವ ಕ್ರಮಗಳು

ಹಾನಿ ಎಲ್ಲೆಲ್ಲಿ

- ಕರ್ನಾಟಕ, ಮಧ್ಯಪ್ರದೇಶದಲ್ಲಿ  ಅತಿಹೆಚ್ಚು ಹಾನಿ
- ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿಗಳಿಂದ ಈ ರಾಜ್ಯಗಳು ಅತಿಹೆಚ್ಚು ಹಾನಿ ಅನುಭವಿಸಿದ್ದು, ಹೆಚ್ಚಿನ ಪರಿಹಾರ ನೀಡಿವೆ.
- ರಾಜಸ್ಥಾನದಲ್ಲಿ ಅತಿಕಡಿಮೆ ಹಾನಿ

ವನ್ಯಜೀವಿ ಹಾವಳಿ ತಡೆಗೆ ಹೆಚ್ಚು ಒತ್ತು ನೀಡುವ ಬದಲು ಜನರಿಗೆ ಮುನ್ನೆಚ್ಚರಿಕೆ ಸಾಧನಗಳನ್ನು ಒದಗಿಸುವುದು,  ನಷ್ಟ ಪರಿಹಾರ ನೀಡುವುದು ಹಾಗೂ ವಿಮೆ ಕಾರ್ಯಕ್ರಮ ಜಾರಿಗೊಳಿಸುವುದು ಉತ್ತಮ

ಕೃತಿ ಕಾರಂತ್,  ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT