ನೀಟ್: ಕನ್ನಡ ಪರೀಕ್ಷೆ 15ಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪಡೆಯಲು ಇಚ್ಛಿಸುವ ಹೊರ ರಾಜ್ಯಗಳ ಮತ್ತು ಗಡಿನಾಡಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಜುಲೈ 10ರ ಬದಲು 15ರಂದು ನಡೆಯಲಿದೆ.
ಬೆಂಗಳೂರು ಮಲ್ಲೇಶ್ವರದಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 11ರಿಂದ ಪರೀಕ್ಷೆ ನಡೆಯುತ್ತದೆ. ಈ ವಿಭಾಗದಡಿ ಸೀಟು ಪಡೆಯುವವರು ಕನ್ನಡ ಭಾಷಾ ಪರೀಕ್ಷೆ ಬಳಿಕವೇ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯಿಸಿ (+)