ಶುಕ್ರವಾರ, ಡಿಸೆಂಬರ್ 6, 2019
17 °C

ಅಹಮದಾಬಾದ್‌ ವಿಶ್ವ ಪಾರಂಪರಿಕ ನಗರ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ ವಿಶ್ವ ಪಾರಂಪರಿಕ ನಗರ

ಅಹಮದಾಬಾದ್‌ :  ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಗುಜರಾತ್‌ನ ಅಹಮದಾಬಾದ್‌ ನಗರ ಸೇರ್ಪಡೆಯಾಗಿದೆ. ಈ ವಿಷಯವನ್ನು ಯುನೆಸ್ಕೊ ಶನಿವಾರ ರಾತ್ರಿ ಟ್ವಿಟರ್‌ ಮೂಲಕ ಘೋಷಣೆ ಮಾಡಿದೆ.

ಈ ಮೂಲಕ, ಅಹಮದಾಬಾದ್‌ ಇಂತಹ ಸ್ಥಾನ ಪಡೆದ ಭಾರತದ ಮೊದಲ ನಗರ ಎನಿಸಿಕೊಂಡಿದೆ.

ಇದರ ಜತೆಗೆ, ದೆಹಲಿ ಮತ್ತು ಮುಂಬೈ ನಗರಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿದ್ದವು.

ಅಹಮದಾಬಾದ್‌ ನಗರವನ್ನು 600 ವರ್ಷಗಳ ಹಿಂದೆ ಅಹಮದ್‌ ಷಾ ಸ್ಥಾಪಿಸಿದ ಎನ್ನಲಾಗುತ್ತದೆ. ಇಲ್ಲಿ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) 26 ಸಂರಕ್ಷಿತ ಸ್ಮಾರಕಗಳು, ನೂರಾರು ಸ್ತಂಭಗಳಿವೆ. 1915ರಿಂದ 1930ರವರೆಗೆ ಮಹಾತ್ಮ ಗಾಂಧಿ ಈ ನಗರದಲ್ಲಿ ವಾಸವಾಗಿದ್ದರು. ಅವರೊಂದಿಗೆ ಸಂಬಂಧ ಹೊಂದಿದ್ದ  ಹಲವು ಸ್ಥಳಗಳು ಇಲ್ಲಿವೆ.

1984ರಲ್ಲಿ ಮೊದಲ ಬಾರಿಗೆ ಈ ನಗರದಲ್ಲಿನ  ಪಾರಂಪರಿಕ ಸ್ಮಾರಕಗಳನ್ನು ರಕ್ಷಿಸುವ ಬಗ್ಗೆ ಅಧ್ಯಯನ ನಡೆಸಲಾಗಿತ್ತು.

ಇದಕ್ಕಾಗಿ ಸ್ಥಳೀಯ ನಗರ ಪಾಲಿಕೆಯಲ್ಲಿ ಪಾರಂಪರಿಕ ಘಟಕವನ್ನು ಸಹ ಸ್ಥಾಪಿಸಲಾಗಿತ್ತು.

ಇನ್ನಷ್ಟು ನಗರ, ಸ್ಥಳಗಳು:  ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಸಮಿತಿಯು  ಚೀನಾದ ಐತಿಹಾಸಿಕ ಅಂತರರಾಷ್ಟ್ರೀಯ ವಸಾಹತು ಕುಲಾಂಗ್ಸು ಕ್ಸಿಯಾನ್, ಇರಾನ್‌ನ ಐತಿಹಾಸಿಕ ನಗರಿ ಯಾಜಿದ್‌ ಸೇರಿದಂತೆ ಹಲವು ನಗರ ಮತ್ತು ತಾಣಗಳನ್ನು ಸೇರ್ಪಡೆ ಮಾಡಿದೆ.

ಭಾರತ ಅಪರಿಮಿತ ಸಂತಸ ಪಡುವ ಸುದ್ದಿ ಇದು!

ನರೇಂದ್ರ ಮೋದಿ, ಪ್ರಧಾನಿ

ಪ್ರತಿ ಭಾರತೀಯನೂ ಅತ್ಯಂತ ಹೆಮ್ಮೆ ಪಡುವ ಕ್ಷಣ

ಅಮಿತ್‌ ಷಾ,  ಬಿಜೆಪಿ ಅಧ್ಯಕ್ಷ

ಅಹಮದಾಬಾದ್‌ಗೆ ಈ ಸ್ಥಾನ ದೊರೆತಿರುವುದು ನನ್ನನ್ನು ಪುಳಕಿತಗೊಳಿಸಿದೆ

ವಿಜಯ್ ರೂಪಾನಿ

ಗುಜರಾತ್‌ ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)