ಶುಕ್ರವಾರ, ಡಿಸೆಂಬರ್ 6, 2019
19 °C

ಮದರ್ ತೆರೆಸಾ ನೀಲಿಯಂಚಿನ ಸೀರೆ ‘ಬೌದ್ಧಿಕ ಆಸ್ತಿ’

ಪಿಟಿಐ Updated:

ಅಕ್ಷರ ಗಾತ್ರ : | |

ಮದರ್ ತೆರೆಸಾ ನೀಲಿಯಂಚಿನ ಸೀರೆ ‘ಬೌದ್ಧಿಕ ಆಸ್ತಿ’

ಕೋಲ್ಕತ್ತ : ಸಂತ ಪದವಿ ಪಡೆದಿರುವ ಮದರ್ ತೆರೆಸಾ ಅವರ ಜನಪ್ರಿಯ ನೀಲಿ ಅಂಚಿನ ಸೀರೆಯನ್ನು ‘ಮಿಷನರೀಸ್ ಆಫ್ ಚಾರಿಟಿ’ ಸಂಘಟನೆಯ ‘ಬೌದ್ಧಿಕ ಆಸ್ತಿ’ ಎಂದು ಗುರುತಿಸಲಾಗಿದೆ.

‘ನೀಲಿ ಅಂಚಿನ ಮಾದರಿಯ ಸೀರೆಯನ್ನು ಬೌದ್ಧಿಕ ಆಸ್ತಿ ಎಂದು ಪರಿಗಣಿಸಲು ಟ್ರೇಡ್ ಮಾರ್ಕ್ ನೋಂದಣಿ ಸಂಸ್ಥೆಯು ಅವಕಾಶ ನೀಡಿದೆ’ ಎಂದು ಬೌದ್ಧಿಕ ಆಸ್ತಿ ಅಟಾರ್ನಿ ಬಿಸ್ವಜಿತ್ ಸರ್ಕಾರ್ ಹೇಳಿದ್ದಾರೆ.

ತೆರೆಸಾ ಅವರು ನೀಲಿ ಬಣ್ಣದ ಮೂರು ಗೆರೆಗಳ ಅಂಚು ಇರುವ ಬಿಳಿ ಸೀರೆಯನ್ನೇ ಯಾವಾಗಲೂ ಉಡುತ್ತಿದ್ದರು. ಈ ಮೂರು ಗೆರೆಗಳಲ್ಲಿ ಹೊರಗಿನ ಗೆರೆಯು ಉಳಿದ ಎರಡು ಗೆರೆಗಳಿಗಿಂತ ದಪ್ಪವಾಗಿರುತ್ತಿತ್ತು.

ನೀಲಿ ಅಂಚಿನ ಸೀರೆಯನ್ನು ಬೌದ್ಧಿಕ ಆಸ್ತಿ ಎಂದು ಕಳೆದ ಸೆಪ್ಟೆಂಬರ್ 4ರಂದು ಗುರುತಿಸಲಾಗಿದೆ. ಸೆಪ್ಟೆಂಬರ್ 4ರಂದೇ ತೆರೆಸಾ ಅವರಿಗೆ ‘ಸಂತ’ ಪದವಿ ನೀಡಲಾಗಿತ್ತು. ಮಿಷನರೀಸ್ ಆಫ್ ಚಾರಿಟಿಯ ಸನ್ಯಾಸಿನಿಯರು ನೀಲಿ ಅಂಚಿನ ಸೀರೆಯನ್ನು ಉಡುತ್ತಾರೆ.

ಉತ್ತರ 24 ಪರಗಣದಲ್ಲಿನ ಟಿಟಾನಗರದಲ್ಲಿರುವ ಗಾಂಧೀಜಿ ಪ್ರೇಮ್ ನಿವಾಸ್‌ನಲ್ಲಿ ಈ ಸೀರೆಗಳನ್ನು ನೇಯಲಾಗುತ್ತದೆ. ಪ್ರತಿ ವರ್ಷ ಸುಮಾರು 4,000 ಸೀರೆಗಳನ್ನು ನೇಯ್ದು ಜಗತ್ತಿನಾದ್ಯಂತ ಸನ್ಯಾಸಿನಿಯರಿಗೆ ವಿತರಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)