ಬುಧವಾರ, ಡಿಸೆಂಬರ್ 11, 2019
25 °C

ಹೆಣ್ಣು ಮಗುವಿಗೆ ಜನ್ಮವಿತ್ತ ‘ಅಪ್ಪ’!

ಪಿಟಿಐ Updated:

ಅಕ್ಷರ ಗಾತ್ರ : | |

ಹೆಣ್ಣು ಮಗುವಿಗೆ ಜನ್ಮವಿತ್ತ ‘ಅಪ್ಪ’!

ಲಂಡನ್‌: ಲಿಂಗಪರಿವರ್ತನೆ ಚಿಕಿತ್ಸೆ ಮಾಡಿಸಿಕೊಂಡ 21 ವರ್ಷದ ಯುವಕನೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಪ್ರಕರಣ ಬ್ರಿಟನ್‌ನಲ್ಲಿ ನಡೆದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರಿಂದ ದಾನವಾಗಿ ಪಡೆದಿದ್ದ ವೀರ್ಯದಿಂದ ಬ್ರಿಟನ್‌ ಪ್ರಜೆ ಹೈಡೆನ್‌ ಕ್ರಾಸ್‌ ಕಳೆದ ವರ್ಷದ ಆರಂಭದಲ್ಲಿ ಗರ್ಭ ಧರಿಸಿದ್ದರು. ಆಗ ಈ ಸುದ್ದಿ ವಿಶ್ವದಾದ್ಯಂತ  ಪ್ರಕಟವಾಗಿತ್ತು.

ಇಲ್ಲಿಯ  ಆಸ್ಪತ್ಸೆಯಲ್ಲಿ ಜೂನ್‌ 16ರಂದು ಶಸ್ತ್ರಚಿಕಿತ್ಸೆಯ ಮೂಲಕ ಹೈಡೆನ್‌ ಅವರ ಹೆರಿಗೆ ಮಾಡಿಸಲಾಗಿದೆ.

‘ಮಗಳು ಟ್ರಿನಿಟಿ ಲೇ ನನ್ನ ಪಾಲಿನ ದೇವತೆ’ ಎಂದು ಹೈಡೆನ್‌  ‘ ದಿ ಸನ್‌’ ಪತ್ರಿಕೆಗೆ ತಿಳಿಸಿದ್ದಾರೆ.  ಕಳೆದ ಮೂರು ವರ್ಷಗಳಿಂದ   ಕಾನೂನುಬದ್ಧವಾಗಿ ಪುರುಷನಂತೆ ಜೀವನ ನಡೆಸುತ್ತಿರುವ ಹೈಡೆನ್‌, ಮಹಿಳೆಯಿಂದ ಪುರುಷದೇಹಕ್ಕೆ ಬದಲಾಗಲು  ಹಾರ್ಮೋನ್‌ ಚಿಕಿತ್ಸೆ ಪಡೆಯುತ್ತಿದ್ದರು. ಭವಿಷ್ಯದಲ್ಲಿ ಮಗು ಪಡೆಯುವ ಹಂಬಲ ಹೊಂದಿದ್ದ ಅವರ ಅಂಡಾಣುಗಳನ್ನು ಸಂರಕ್ಷಿಸಿಡಲು  ಬ್ರಿಟನ್‌ನ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ (ಎನ್‌ಎಚ್‌ಎಸ್‌) ನಿರಾಕರಿಸಿತ್ತು. 

ಈ ಕಾರಣದಿಂದ, ತಮ್ಮ ಲಿಂಗ ಪರಿವರ್ತನೆ ಚಿಕಿತ್ಸೆಯನ್ನು ಅರ್ಧದಲ್ಲೇ ತಡೆಹಿಡಿದಿದ್ದ ಹೈಡೆನ್‌, ವೀರ್ಯ ದಾನಿಯನ್ನು ಪತ್ತೆ   ಮಾಡಿದ್ದರು. ಇದೀಗ ಮಗು ಪಡೆಯುವ ತಮ್ಮ ಬಯಕೆ  ಪೂರ್ಣಗೊಂಡಿರುವುದರಿಂದ ಹೈಡೆನ್‌ ಆದಷ್ಟು ಬೇಗ ಲಿಂಗ ಪರಿವರ್ತನೆಯ ಚಿಕಿತ್ಸೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ಪ್ರತಿಕ್ರಿಯಿಸಿ (+)