ಶುಕ್ರವಾರ, ಡಿಸೆಂಬರ್ 13, 2019
17 °C
ಇಂದು ಪ್ರೀ ಕ್ವಾರ್ಟರ್‌

ಫೆಡರರ್‌–ದಿಮಿತ್ರೊವ್ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆಡರರ್‌–ದಿಮಿತ್ರೊವ್ ಪೈಪೋಟಿ

ಲಂಡನ್‌:  ವಿಂಬಲ್ಡನ್‌ ಟೆನಿಸ್ ಚಾಂಪಿ ಯನ್‌ಷಿಪ್‌ನಲ್ಲಿ ಸೋಮವಾರ  ಪ್ರಿ ಕ್ವಾರ್ಟರ್‌ ಫೈನಲ್ ಹಣಾಹಣಿ ನಡೆಯ ಲಿದೆ. ಆಲ್‌ ಇಂಗ್ಲೆಂಡ್ ಕ್ರೀಡಾಂಗಣದ ಹಸಿರು ಕಣದಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಮೇಲೆ ಕಣ್ಣು ನೆಟ್ಟಿರುವ ರೋಜರ್ ಫೆಡರರ್‌ ಹಾಗೂ ಗ್ರಿಗೊರ್‌ ದಿಮಿತ್ರೊವ್ ನಡು ವಿನ ಪೈಪೋಟಿ ದಿನದ ಪ್ರಮುಖ ಆಕರ್ಷಣೆ ಎನಿಸಿದೆ.

ಫೆಡರರ್ ಏಳು ಬಾರಿ ವಿಂಬಲ್ಡನ್ ಗೆದ್ದುಕೊಂಡಿದ್ದು ಎಂಟನೇ ಪ್ರಶಸ್ತಿಯ ಗುರಿ ಹೊಂದಿದ್ದಾರೆ.

ಎರಡನೇ ಕ್ರಮಾಂಕದ ಆಟಗಾರ ರಫೆಲ್ ನಡಾಲ್‌ ಅವರು ಗಿಲ್ಲೆಸ್ ಮುಲ್ಲರ್ ವಿರುದ್ಧ ಆಡಲಿದ್ದಾರೆ.

ಸರ್ಬಿಯಾದ ಅಗ್ರ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್ ಫ್ರಾನ್ಸ್‌ನ ಅದ್ರಿಯಾನ್‌ ಮುನ್ನರಿನೊ ಅವರಿಗೆ ಸವಾಲು ಒಡ್ಡಲಿದ್ದಾರೆ.

11ನೇ ಶ್ರೇಯಾಂಕದ ಥಾಮಸ್‌ ಬರ್ಡಿಕ್ ಮತ್ತು ಆಸ್ಟ್ರೇಲಿಯಾದ  ಡೊಮಿನಿಕ್ ಥೀಮ್ ನಡುವೆ ಜಿದ್ದಾ ಜಿದ್ದಿನ ಪೈಪೋಟಿಯ ನಿರೀಕ್ಷೆ ಇದೆ.

ಫ್ರೆಂಚ್ ಓಪನ್ ಗೆದ್ದುಕೊಳ್ಳುವ ಮೂಲಕ ಮಹಿಳೆಯರ ಸಿಂಗಲ್ಸ್ ವಿಭಾಗ ದಲ್ಲಿ ಪ್ರಮುಖ ಆಕರ್ಷಣೆ ಎನಿಸಿರುವ ಜೆಲೆನಾ ಓಸ್ತಪೆಂಕೊ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಎದುರು ಕಣಕ್ಕಿಳಿಯಲಿದ್ದಾರೆ.

2015ರಲ್ಲಿ ಫೈನಲ್‌ ತಲುಪಿದ್ದ ಏಂಜಲಿಕ್ ಕೆರ್ಬರ್ ಹಾಗೂ ಗಾರ್ಬೈನ್‌  ಮುಗುರುಜಾ ಇಲ್ಲಿ 16ರ ಘಟ್ಟದಲ್ಲಿ ಮತ್ತೊಮ್ಮೆ ಎದುರಾಗಲಿದ್ದಾರೆ.

ಕೆರ್ಬರ್ ಹೋದ ವರ್ಷ ಆಸ್ಟ್ರೇಲಿಯಾ ಹಾಗೂ ಅಮೆರಿಕ ಓಪನ್ ಗೆದ್ದುಕೊಂಡಿರುವ ಅನುಭವ ಹೊಂದಿದ್ದಾರೆ. ವೀನಸ್ ವಿಲಿಯಮ್ಸ್‌ ಅವರು ಅನಾ ಕೊನುಜ್ ಅವರ ಸವಾಲು ಎದುರಿಸಲಿದ್ದಾರೆ.

ಪ್ರಬಲ ಸ್ಪರ್ಧಿಗಳಾದ ವಿಕ್ಟೋರಿಯಾ ಅಜರೆಂಕಾ ಹಾಗೂ ಸಿಮೊನಾ ಹಲೆಪ್ ನಡುವಿನ ಪೈಪೋಟಿ ತೀವ್ರ ಕುತೂಹಲ ಹುಟ್ಟಿಸಿದೆ.

ಪ್ರತಿಕ್ರಿಯಿಸಿ (+)