ಮಂಗಳವಾರ, ಡಿಸೆಂಬರ್ 10, 2019
17 °C
ವಿಂಬಲ್ಡನ್‌

ಮೂರನೇ ಸುತ್ತಿಗೆ ಸಾನಿಯಾ

Published:
Updated:
ಮೂರನೇ ಸುತ್ತಿಗೆ ಸಾನಿಯಾ

ಲಂಡನ್‌: ಭಾರತದ ಸಾನಿಯಾ ಮಿರ್ಜಾ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಎರಡೂ ವಿಭಾಗಗಳಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪಂದ್ಯ ಗಳಲ್ಲಿ ರೋಹನ್ ಬೋಪಣ್ಣ ಹಾಗೂ ಪೂರವ್ ರಾಜ ಕೂಡ ಮಿಶ್ರ ಡಬಲ್ಸ್ ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.

ಎರಡನೇ ಸುತ್ತಿನ ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸಾನಿಯಾ ಮತ್ತು ಕ್ರೊವೇ ಷ್ಯಾದ ಇವಾನ್ ದೊಡಿಗ್ ಜೋಡಿ 7–6, 6–2ರಲ್ಲಿ ಜಪಾನ್‌ನ ಯುಸುಕೆ ವಾತನುಕಿ ಮತ್ತು ಮಕೊಟೊ ನಿನೊ ಮಿಯಾ ವಿರುದ್ಧ ಜಯ ದಾಖಲಿಸಿದರು.

ಮುಂದಿನ ಪಂದ್ಯದಲ್ಲಿ ಈ ಜೋಡಿ ಹೆರ್ನಿ ಕೊಂಟಿನೆನ್ ಮತ್ತು ಹೆದರ್ ವಾಟ್ಸನ್ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮತ್ತು ಬೆಲ್ಜಿಯಂನ ಕ್ರಿಸ್ಟೆನ್‌ ಫ್ಲಿಪ್‌ಕೆನ್ಸ್‌ ಜೋಡಿ 6–3, 3–6, 6–4ರಲ್ಲಿ ಬ್ರಿಟನ್‌ನ ನಯೊಮಿ ಬ್ರೋಡಿ ಮತ್ತು ಹೆದರ್‌ ವಾಟ್ಸನ್‌ ಮೇಲೆ ಜಯ ದಾಖಲಿಸಿತು.

45 ನಿಮಿಷಗಳಲ್ಲಿ ಸಾನಿಯಾ ಜೋಡಿ ಗೆಲುವು ಸಾಧಿಸಿದರು.

13ನೇ ಶ್ರೇಯಾಂಕದ ಸಾನಿಯಾ–ಕ್ರಿಸ್ಟೆನ್ ಜೋಡಿ ಮುಂದಿನ ಪಂದ್ಯದಲ್ಲಿ  ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಮತ್ತು ಚೀನಾ ತೈಪೆಯ ಯಂಗ್ ಜಾನ್ ಚನ್ ವಿರುದ್ಧ ಆಡಲಿದ್ದಾರೆ.

ಪೂರವ್ ರಾಜ ಹಾಗೂ ಜಪಾನ್‌ನ ಎರಿ ಹೊಜುಮಿ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 5–7, 6–4, 6–2ರಲ್ಲಿ ಅಮೆರಿಕದ ಜೇಮ್ಸ್‌ ಕೆರಿಟನಿ ಮತ್ತು ಜೆಕ್ ಗಣ ರಾಜ್ಯದ ರೆನಟ ವೊರಕೊವಾ ಅವರನ್ನು ಮಣಿಸಿತು. ಈ ಜೋಡಿ ಮುಂದಿನ ಪಂದ್ಯದಲ್ಲಿ   ಡೇನಿಯಲ್ ನೆಸ್ಟರ್‌ ಮತ್ತು ಆ್ಯಂಡ್ರೆಜ ಕ್ಲೆಪಕ್ ವಿರುದ್ಧ ಆಡಲಿದೆ.

ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಗೇಬ್ರಿಯೆಲಾ ದಬ್ರೋವ್ಸ್‌ಕಿ  ಮಿಶ್ರ ಡಬಲ್ಸ್ನಲ್ಲಿ 7–6, 7–5ರಲ್ಲಿ ಫ್ರಾನ್ಸ್‌ನ ಫ್ಯಾಬ್ರಿಸ್ ಮಾರ್ಟಿನ್ ಮತ್ತು ರುಮೇನಿಯಾದ ರಲುಕಾ ಒಲರು ಮೇಲೆ ಜಯ ದಾಖಲಿಸಿದರು.

ಪ್ರತಿಕ್ರಿಯಿಸಿ (+)