ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭಾರತ ತಂಡದ ಕೋಚ್‌ ಆಯ್ಕೆ

ರವಿಶಾಸ್ತ್ರಿ ಪ್ರಮುಖ ಸ್ಪರ್ಧಿ
Last Updated 9 ಜುಲೈ 2017, 19:16 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು ಸೋಮ ವಾರ ಸಭೆ ಸೇರಲಿರುವ ಕ್ರಿಕೆಟ್‌ ಸಲಹಾ ಸಮಿತಿ ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ.

ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಅವರು ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಮೂಲಗಳ ಪ್ರಕಾರ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್‌, ಟಾಮ್ ಮೂಡಿ, ಫಿಲಿಪ್ ಸಿಮನ್ಸ್‌, ರಿಚರ್ಡ್‌ ಪೈಬಸ್‌ ಮತ್ತು ಲಾಲ್‌ಚಂದ್‌ ರಜಪೂತ್ ಅವರನ್ನು ಸಂದರ್ಶನಕ್ಕೆ ಕರೆಯುವ ಸಾಧ್ಯತೆ ಇದೆ. 

ಕರ್ನಾಟಕದ ದೊಡ್ಡ ಗಣೇಶ, ಒಮನ್‌ ಕ್ರಿಕೆಟ್ ತಂಡದ ಕೋಚ್‌ ರಾಕೇಶ್ ಶರ್ಮಾ,  ದಕ್ಷಿಣ ಆಫ್ರಿಕಾದ ಲ್ಯಾನ್ಸ್‌ ಕ್ಲೂಸ್ನರ್ ಮತ್ತು ಎಂಜಿನಿಯರ್‌ ಉಪೇಂದ್ರನಾಥ್‌ ಬ್ರಹ್ಮಚಾರಿ ಅವರು ಕೂಡ ಅರ್ಜಿ ಸಲ್ಲಿಸಿದ್ದರು.

ವಿರಾಟ್ ಕೊಹ್ಲಿ ಜೊತೆಗೆ ಭಿನ್ನಮತ ವಿದೆ ಎಂದು ಹೇಳಿ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರಿಂದ ಕೋಚ್ ಹುದ್ದೆ ಖಾಲಿಯಾಗಿತ್ತು. ಮುಖ್ಯ ಕೋಚ್ ಇಲ್ಲದೇ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು.

ಕೋಚ್‌ ಆಯ್ಕೆ ಪ್ರಕ್ರಿಯೆ ಆರಂಭ ಗೊಂಡು ಕೆಲವು ದಿನಗಳ ನಂತರ ರವಿ ಶಾಸ್ತ್ರಿ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಕೋಚ್‌ ಹುದ್ದೆ ಅವರ ಹೆಗಲಿಗೆ ಏರುವ ಸಾಧ್ಯತೆಯೇ ಹೆಚ್ಚು ಎಂಬ ವದಂತಿ ಈಗ ದಟ್ಟವಾಗಿದೆ.

ತಂಡದ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆ ರವಿಶಾಸ್ತ್ರಿ ಹೊಂದಿದ್ದ ಉತ್ತಮ ಸಂಬಂಧ ಕ್ರಿಕೆಟ್ ಸಲಹಾ ಸಮಿತಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಆದರೆ ಸಮಿತಿಯ ಸದಸ್ಯ ಸೌರವ್‌ ಗಂಗೂಲಿ ಅವರೊಂದಿಗೆ ರವಿಶಾಸ್ತ್ರಿ ಅವರಿಗೆ ಸಾಮರಸ್ಯವಿಲ್ಲ. ಇಬ್ಬರೂ ಅನೇಕ ಬಾರಿ ಬಹಿರಂಗ ವಾಗಿಯೇ ಆರೋಪ–ಪ್ರತ್ಯಾರೋಪ ಗಳನ್ನು ಮಾಡಿದ್ದಾರೆ.

ಕೋಚ್‌ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸ್ಕೈಪ್‌ ಮೂಲಕ ಸಂದರ್ಶನ ನಡೆಸಿದ್ದಾಗ ಸೌರವ್ ಗಂಗೂಲಿ ಹಾಜರಿ ರಲಿಲ್ಲ ಎಂದು ರವಿಶಾಸ್ತ್ರಿ ಇತ್ತೀಚೆಗೆ ದೂರಿದ್ದರು. ‘ರವಿಶಾಸ್ತ್ರಿ ಗಂಭೀರವಾಗಿ ದ್ದರೆ ನಾನು ಹಾಜರಿರುತ್ತಿದ್ದೆ’ ಎಂದು ಗಂಗೂಲಿ ಪ್ರತ್ಯುತ್ತರ ನೀಡಿದ್ದರು.

ಸೆಹ್ವಾಗ್‌ ಮೇಲೆಯೂ ಗಮನ: ಸ್ಪರ್ಧೆಯಲ್ಲಿರುವ ಮತ್ತೊಬ್ಬ ಪ್ರಮುಖ ಅಭ್ಯರ್ಥಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌. ರವಿಶಾಸ್ತ್ರಿ ಅವರನ್ನು ಹೊರತುಪಡಿಸಿದರೆ ಹೆಚ್ಚು ಗಮನ ಇರುವುದು ಸೆಹ್ವಾಗ್ ಮೇಲೆ. ಅವರು ಬ್ಯಾಟಿಂಗ್‌ನಲ್ಲಿ ವಿಶ್ವಪ್ರಸಿದ್ಧಿ ಗಳಿಸಿದ್ದರೂ ಕೋಚ್ ಆಗಿ ನೇಮಕ ಗೊಂಡರೆ ಎಷ್ಟರ ಮಟ್ಟಿಗೆ ಸಫಲರಾ ಗುವರು ಎಂಬುದು ದೊಡ್ಡ ಪ್ರಶ್ನೆ.

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿರ್ದೇಶಕರಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರೂ ಸೆಹ್ವಾಗ್ ಅವರಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಟಾಮ್‌ ಮೂಡಿ ಅವರನ್ನು ಕೂಡ ಕ್ರಿಕೆಟ್‌ ಸಲಹಾ ಸಮಿತಿ ಪರಿಗಣಿ ಸುವ ಸಾಧ್ಯತೆ ಇದೆ. ವಿಶ್ವ ಕ್ರಿಕೆಟ್‌ನಲ್ಲಿ ಅವರಿಗೆ ಇರುವ ಅಪಾರ ಅನುಭವ ಇದಕ್ಕೆ ಕಾರಣವಾಗಲಿದೆ.

 2011ರ ವಿಶ್ವಕಪ್ ಫೈನಲ್‌ ತಲುಪಿದ ಶ್ರೀಲಂಕಾ ತಂಡವನ್ನು ತರಬೇತುಗೊಳಿ ಸಿದ ಶ್ರೇಯಸ್ಸು ಮೂಡಿ ಅವರಿಗೆ ಇದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾ ಬಾದ್‌ಗೆ ಅವರು ತರಬೇತಿ ನೀಡಿದ್ದಾರೆ. ಕಳೆದ ಬಾರಿಯೂ ಟಾಮ್ ಮೂಡಿ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಕುಂಬ್ಳೆ ಅವರ ಮುಂದೆ ಮೂಡಿ ಪ್ರತಿಭೆ ಮಂಕಾಗಿತ್ತು. ಸೌಮ್ಯ ಸ್ವಭಾವದ ಟಾಮ್‌ ಮೂಡಿ ಅವರಿಗೆ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸುವ ಕಲೆ ಕರಗತವಾಗಿದೆ. ಹೀಗಾಗಿ ಅವರ ನೇಮಕಕ್ಕೂ ಸಾಧ್ಯತೆ ಇದೆ. ಮೂಡಿ ಕೋಚ್ ಆದರೆ ಆಸ್ಟ್ರೇಲಿಯಾದವರೇ ಆದ ಕ್ರೆಗ್‌ ಮೆಕ್‌ಡೆರ್ಮಟ್‌ ಬೌಲಿಂಗ್ ಕೋಚ್ ಆಗುವ ಸಾಧ್ಯತೆ ಹೆಚ್ಚು ಇದೆ. ರವಿಶಾಸ್ತ್ರಿ ಮುಖ್ಯ ಕೋಚ್‌ ಆದರೆ ಬೌಲಿಂಗ್ ಕೋಚ್‌ ಹುದ್ದೆಯನ್ನು ಭರತ್ ಅರುಣ್‌ ಉಳಿಸಿಕೊಳ್ಳಬಹುದು. ದಕ್ಷಿಣ ಆಫ್ರಿಕಾ ದೇಶಿ ಕ್ರಿಕೆಟ್‌ನಲ್ಲಿ ವಿವಿಧ ತಂಡಗಳಿಗೆ ತರಬೇತಿ ನೀಡಿರುವ ಅನುಭವ ಇರುವ ಲ್ಯಾನ್ಸ್ ಕ್ಲೂಸ್ನರ್‌ ಮತ್ತು ಅಫ್ಗಾನಿಸ್ತಾನ, ಐರ್ಲೆಂಡ್‌ನಂಥ ತಂಡಗಳಿಗೆ ಕೋಚಿಂಗ್ ಮಾಡಿರುವ ಸಿಮನ್ಸ್‌ ಅವರಿಗೆ ಭಾರತ ತಂಡದ ಕೋಚ್ ಹುದ್ದೆ ಒಲಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT