ಶನಿವಾರ, ಡಿಸೆಂಬರ್ 7, 2019
24 °C
ವೆಸ್ಟ್ಇಂಡೀಸ್ ವಿರುದ್ಧದ ಏಕೈಕ ಟ್ವೆಂಟಿ–20 ಪಂದ್ಯ

ಭಾರತಕ್ಕೆ ಕಾರ್ತಿಕ್ ಆಸರೆ

Published:
Updated:
ಭಾರತಕ್ಕೆ ಕಾರ್ತಿಕ್ ಆಸರೆ

ಕಿಂಗ್ಸ್‌ಟನ್‌: ಆರಂಭಿಕ ಬ್ಯಾಟ್ಸ್‌ಮನ್‌ ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದ ವೇಳೆ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಸರೆಯಾದರು.

ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟ್ವೆಂಟಿ–20 ಪಂದ್ಯದಲ್ಲಿ ಭಾರತ ತಂಡ 191 ರನ್‌ಗಳ ಉತ್ತಮ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

ಇನಿಂಗ್ಸ್ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ (39) ಹಾಗೂ ಶಿಖರ್ ಧವನ್ (23) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಕೆರ್ಸಿಕ್ ವಿಲಿಯಮ್ಸ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಸುನಿಲ್ ನಾರಾಯಣಗೆ ಕ್ಯಾಚ್ ನೀಡಿದರು. ಶಿಖರ್ ರನ್‌ಔಟ್‌ ಆಗಿ ಪೆವಿಲಿಯನ್ ಸೇರಿದರು.

ಯುವ ಆಟಗಾರ ರಿಷಭ್‌ ಪಂತ್‌ 25 ಎಸೆತಗಳನ್ನು ಎದುರಿಸಿ 38ರನ್ ದಾಖಲಿಸುವ ಮೂಲಕ ತಂಡದ ಮೊತ್ತ ಹಿಗ್ಗಿಸಲು ಪ್ರಯತ್ನಿಸಿದರು.

ಬಳಿಕ ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲೇ 5 ಬೌಂಡರಿ 3 ಸಿಕ್ಸರ್ ಸಿಡಿಸುವ ಮೂಲಕ 48ರನ್ ದಾಖಲಿಸಿ ಮಿಂಚಿದರು.

ಮಹೇಂದ್ರ ಸಿಂಗ್‌ ದೋನಿ ಹಾಗೂ ಕೇದಾರ್ ಜಾಧವ್ ಕ್ರಮವಾಗಿ 2, 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ರವೀಂದ್ರ ಜಡೇಜ 8 ಎಸೆತಗಳಲ್ಲಿ 13 ರನ್ ಗಳಿಸಿದರು. ಒಂದು ಸಿಕ್ಸರ್‌ ಕೂಡ ಅವರ ಬ್ಯಾಟ್‌ನಿಂದ ಹೊಮ್ಮಿತು.

ಕೊನೆಯ ಓವರ್‌ಗಳಲ್ಲಿ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್‌ (11) ಮುರಿಯದ ಜತೆಯಾಟದಲ್ಲಿ 26 ರನ್ ಕಲೆಹಾಕಿದರು.

ಮರ್ಲಾನ್‌ ಸ್ಯಾಮುಯಲ್ಸ್ 32 ರನ್‌ಗಳಿಗೆ 1 ವಿಕೆಟ್ ಉರುಳಿಸಿದರು. ಕೆರ್ಸಿಕ್ ವಿಲಿಯಮ್ಸ್ 42 ರನ್‌ ನೀಡಿ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 (ವಿರಾಟ್ ಕೊಹ್ಲಿ 39, ಶಿಖರ್ ಧವನ್ 23, ರಿಷಭ್ ಪಂತ್ 38, ದಿನೇಶ್ ಕಾರ್ತಿಕ್ 48, ಮಹೇಂದ್ರ ಸಿಂಗ್ ದೋನಿ 2, ಕೇದಾರ್ ಜಾಧವ್ 4, ರವೀಂದ್ರ ಜಡೇಜ 13; ಮರ್ಲಾನ್ ಸ್ಯಾಮುಯಲ್ಸ್ 32ಕ್ಕೆ1).

ಪ್ರತಿಕ್ರಿಯಿಸಿ (+)