ಭಾನುವಾರ, ಡಿಸೆಂಬರ್ 8, 2019
24 °C

ಫಾರ್ಮುಲಾ–1: ಬೊಟ್ಟಾಸ್‌ಗೆ ಪ್ರಶಸ್ತಿ

Published:
Updated:
ಫಾರ್ಮುಲಾ–1: ಬೊಟ್ಟಾಸ್‌ಗೆ ಪ್ರಶಸ್ತಿ

ಸ್ಪೀಲ್‌ಬರ್ಗ್‌ (ಎಎಫ್‌ಪಿ): ಅಮೋಘ ಚಾಲನಾ ಕೌಶಲ ಮೆರೆದ ಮರ್ಸಿಡೀಸ್‌ ತಂಡದ ವಲ್ಟೆರಿ ಬೊಟ್ಟಾಸ್‌ ಅವರು ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ–1 ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿಹಿಡಿದಿದ್ದಾರೆ.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಬೊಟ್ಟಾಸ್‌ ಅವರು ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟ್ಟಲ್‌ ಅವರನ್ನು ಹಿಂದಿಕ್ಕಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ರೆಡ್‌ಬುಲ್‌ ತಂಡದ ಡೇನಿಯಲ್‌ ರಿಕಿಯಾರ್ಡೊ ಅವರು ಮೂರನೇ ಸ್ಥಾನಕ್ಕೆ  ತೃಪ್ತಿಪಟ್ಟರು. ಮರ್ಸಿಡೀಸ್‌ ತಂಡದ ಮತ್ತೊಬ್ಬ ಚಾಲಕ ಲೆವಿಸ್‌ ಹ್ಯಾಮಿಲ್ಟನ್‌ ಅವರು ನಾಲ್ಕನೇಯವ ರಾಗಿ ಸ್ಪರ್ಧೆ ಕೊನೆಗೊಳಿಸಿದರು.

ಪ್ರತಿಕ್ರಿಯಿಸಿ (+)