ಭಾನುವಾರ, ಡಿಸೆಂಬರ್ 8, 2019
20 °C

ಗಡಿಯಲ್ಲಿ ಒಳನುಸುಳುವ ಯತ್ನ ವಿಫಲ; ಮೂವರು ಉಗ್ರರ ಹತ್ಯೆಗೈದ ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

ಗಡಿಯಲ್ಲಿ ಒಳನುಸುಳುವ ಯತ್ನ ವಿಫಲ; ಮೂವರು ಉಗ್ರರ ಹತ್ಯೆಗೈದ ಸೇನೆ

ಶ್ರೀನಗರ: ಉತ್ತರ ಕಾಶ್ಮೀರದ ನೌಗಾಮ್‌ ಜಿಲ್ಲೆ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತದೊಳಕ್ಕೆ ನುಸುಳುತ್ತಿದ್ದ ಉಗ್ರರ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ ಸೋಮವಾರ ಮೂವರು ಉಗ್ರರನ್ನು ಹತ್ಯೆ ಮಾಡಿದೆ. 

ನೌಗಾಮ್‌ ವಲಯದಲ್ಲಿ ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಕಂಡು ಬಂದ ಉಗ್ರರ ಚಲನವಲನಗಳನ್ನು ಗಮನಿಸಿ, ಇಡೀ ರಾತ್ರಿ ಭದ್ರತಾ ಪಡೆ ಶೋಧ ನಡೆಸಿದೆ. ಸವಾಲಾಗಿ ಪರಿಣಮಿಸಿದ್ದ ಉಗ್ರರು ಸೋಮವಾರ ಬೆಳಗಿನಜಾವ ಪತ್ತೆಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆ ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಉಗ್ರರ ಗುಂಪು ಒಳನುಸುಳಲು ಸಾಧ್ಯವಾಗಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಪ್ರದೇಶದಲ್ಲಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.

ಪ್ರತಿಕ್ರಿಯಿಸಿ (+)