ಬುಧವಾರ, ಡಿಸೆಂಬರ್ 11, 2019
24 °C

68ನೇ ವಸಂತಕ್ಕೆ ಕಾಲಿಟ್ಟ ಸುನೀಲ್‌ ಗಾವಸ್ಕರ್‌

Published:
Updated:
68ನೇ ವಸಂತಕ್ಕೆ ಕಾಲಿಟ್ಟ ಸುನೀಲ್‌ ಗಾವಸ್ಕರ್‌

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಸುನೀಲ್‌ ಗಾವಸ್ಕರ್‌ ಸೋಮವಾರ 68ನೇ ವಸಂತಕ್ಕೆ ಕಾಲಿಟ್ಟಿದ್ದು, ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರೈಸಿದವರಲ್ಲಿ ಗಾವಸ್ಕರ್‌ ಮೊದಲಿಗರು. ಜತೆಗೆ 1970ರಿಂದ 1980ರವರೆಗೆ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಅವರದು. 

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್‌, ಆಕಾಶ್‌ ಚೋಪ್ರಾ ಭಾರತದ ಹಿರಿಯ ಆಟಗಾರ ವಿರೇಂದ್ರ ಸೆಹ್ವಾಗ್‌, ಶಿಖರ್‌ ಧವನ್‌ ಸೇರಿದಂತೆ ಹಲವರು ಟ್ವೀಟರ್‌ನಲ್ಲಿ ಸುನೀಲ್‌ ಗಾವಸ್ಕರ್‌ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

*

*

*

*

*

ಸುನೀಲ್‌ ಗಾವಸ್ಕರ್‌ ವೆಸ್ಟ್‌ ಇಂಡೀಸ್‌ ವಿರುದ್ಧ ಅಧಿಕ ಶತಕ (13)ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 774 ರನ್‌ ಗಳಿಸಿದ್ದು, ಗಾವಸ್ಕರ್‌ ಅವರ ವೈಯಾಕ್ತಿಕ ಗರಿಷ್ಠ ರನ್‌ ಇದಾಗಿದೆ.

2012ರಲ್ಲಿ ಕೇಂದ್ರ ಸರ್ಕಾರ ಸುನೀಲ್‌ ಗಾವಸ್ಕರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರತಿಕ್ರಿಯಿಸಿ (+)