ಶುಕ್ರವಾರ, ಡಿಸೆಂಬರ್ 6, 2019
21 °C

ಐಸಿಸಿ ರ‍್ಯಾಂಕಿಂಗ್‌: ಟೆಸ್ಟ್‌ ಕ್ರಿಕೆಟ್‌ ಆಗ್ರಸ್ಥಾನದಲ್ಲಿ ಜಡೇಜ, ಆರ್‌.ಅಶ್ವಿನ್‌

Published:
Updated:
ಐಸಿಸಿ ರ‍್ಯಾಂಕಿಂಗ್‌: ಟೆಸ್ಟ್‌ ಕ್ರಿಕೆಟ್‌ ಆಗ್ರಸ್ಥಾನದಲ್ಲಿ ಜಡೇಜ, ಆರ್‌.ಅಶ್ವಿನ್‌

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಸೋಮವಾರ ಟೆಸ್ಟ್‌ ಕ್ರಿಕೆಟ್‌ ಆಗ್ರ ಹತ್ತು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತೀಯ ಸ್ಪಿನರ್‌ಗಳಾದ ರವೀಂದ್ರ ಜಡೇಜ ಹಾಗೂ ಆರ್‌. ಅಶ್ವಿನ್‌ ಮೊದಲೆರಡು ಸ್ಥಾನ ಗಳಿಸಿದ್ದಾರೆ.

ಜಡೇಜ 898 ಪಾಯಿಂಟ್ಸ್‌ ಹೊಂದಿದ್ದು ಮೊದಲ ಸ್ಥಾನ ಪಡೆದಿದ್ದಾರೆ.  865 ಪಾಯಿಂಟ್ಸ್‌ ಹೊಂದಿರುವ ಆರ್‌.ಅಶ್ವಿನ್‌ ಎರಡನೇ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಪಟ್ಟಿಯಲ್ಲಿ ಈ ಇಬ್ಬರು ಆಟಗಾರರು ತಲಾ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಟೆಸ್ಟ್‌ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಟೀಂ ಇಂಡಿಯಾದ ಚೇತೇಶ್ವರ್‌ ಪೂಜಾರ ಹಾಗೂ ನಾಯಕ ವಿರಾಟ್‌ ಕೊಹ್ಲಿ ನಾಲ್ಕು, ಐದನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ನಾಯಕ ಸ್ಟೀವ್‌ ಸ್ಮಿತ್‌ ಆಗ್ರಸ್ಥಾನದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)