ಶುಕ್ರವಾರ, ಡಿಸೆಂಬರ್ 6, 2019
17 °C

ಮಹಿಳಾ ಸಿಬ್ಬಂದಿ ಇಲ್ಲದೆ ಮಧ್ಯರಾತ್ರಿ ಮನೆಗೆ ನುಗ್ಗಿದ ಪೊಲೀಸರಿಂದ ಅನುಚಿತ ವರ್ತನೆ: ಸವಿತಾ ಸತ್ಯಜಿತ್ ಸುರತ್ಕಲ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಸಿಬ್ಬಂದಿ ಇಲ್ಲದೆ ಮಧ್ಯರಾತ್ರಿ ಮನೆಗೆ ನುಗ್ಗಿದ ಪೊಲೀಸರಿಂದ ಅನುಚಿತ ವರ್ತನೆ: ಸವಿತಾ ಸತ್ಯಜಿತ್ ಸುರತ್ಕಲ್ ಆರೋಪ

ಮಂಗಳೂರು: ಮಧ್ಯರಾತ್ರಿ 2 ಗಂಟೆಗೆ ಮಹಿಳಾ ಸಿಬ್ಬಂದಿ ಇಲ್ಲದೆ, ಸುಮಾರು 50 ಪೊಲೀಸರು ಮನೆಗೆ ನುಗ್ಗಿ, ಮಹಿಳೆಯರು ಮತ್ತು ಮಕ್ಕಳ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರ ಪತ್ನಿ ಸವಿತಾ ಸತ್ಯಜಿತ್ ಆರೋಪಿಸಿದರು.

ನನ್ನ ಪತಿ ಮನೆಯಲ್ಲಿ ಇರಲಿಲ್ಲ. ರಾತ್ರಿ ಹೊತ್ತು ಮನೆಗೆ ಪ್ರವೇಶಿಸಿ, ಇಡೀ ಮನೆಯನ್ನು ಶೋಧಿಸಿದ್ದಾರೆ. ಒಬ್ಬರೆ ಒಬ್ಬ ಮಹಿಳಾ ಸಿಬ್ಬಂದಿ ಇರಲಿಲ್ಲ ಎಂದು ದೂರಿದರು.

ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಮುಸ್ಲಿಂ ಭಯೋತ್ಪಾದಕರು, ಕರಾವಳಿಯ ಮೂಲಕ ಕರ್ನಾಟಕವನ್ನು ಕಾಶ್ಮೀರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು‌.

ಪ್ರತಿಕ್ರಿಯಿಸಿ (+)