ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಪಲ್ ಕೇಕ್‌’ನ ಹಾಟ್‌ ಬೆಡಗಿ

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಸಂದೀಪ್‌ ಮಲ್ಹಾನಿ ನಿರ್ದೇಶನದ ‘ಮಾ’ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಶುಭಾ ರಕ್ಷಾ ಈಗ ಹಿಂದಿ ಆಲ್ಬಂ ಸಾಂಗ್‌ ಒಂದರಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ ಬಾಗಿಲು ಅವರಿಗೆ ಈಗ ತೆರೆದಿದೆ.

ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುವ ಮುನ್ನ ತುಂಡುಡುಗೆ ಧರಿಸಿ, ನಡು ಬಳುಕಿಸಿ, ‍ರ‍್ಯಾಂಪ್‌ ಮೇಲೆ ನಗು ತುಳುಕಿಸುತ್ತಿದ್ದ ರೂಪದರ್ಶಿಯಾಗಿದ್ದರು ಶುಭಾ. ‘ಬಳ್ಳಾರಿ ದರ್ಬಾರ್‌’ ಎಂಬ ಇನ್ನೂ ತೆರೆಕಾಣದ ಕನ್ನಡ ಸಿನಿಮಾವೊಂದದರಲ್ಲಿ ತುಂಬಾ ಹಾಟ್‌ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದುದೂ ಇದೇ ಸುಂದರಿ. ಈಗ ಅವರು ‘ಆ್ಯಪಲ್‌ ಕೇಕ್‌’ ಎಂಬ ಕನ್ನಡ ಚಿತ್ರದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಜಿತ್‌ ಕುಮಾರ್‌ ಗೌಡ ನಿರ್ದೇಶನದ ‘ಆ್ಯಪಲ್‌ ಕೇಕ್‌’ವಿಭಿನ್ನ ಚಿತ್ರಕತೆ ಇರುವ ಸಿನಿಮಾವಂತೆ. ಬೇಕರಿಯ ಉಳಿಕೆ ತಿಂಡಿಗಳನ್ನೆಲ್ಲಾ ಬಳಸಿ ತಯಾರಿಸುವ ಆ್ಯಪಲ್‌ ಕೇಕ್‌ ಅನ್ನು ರೂಪಕವಾಗಿಟ್ಟುಕೊಂಡು ನಿರ್ದೇಶಕರು ಸಿನಿ ಜಗತ್ತಿನಲ್ಲಿ ತೆರೆಯ ಹಿಂದೆ ದುಡಿಯುವವರ ಕಷ್ಟ ಸುಖವನ್ನು ಬೆಳ್ಳಿ ಪರದೆಯ ಮೇಲೆ ತೋರಿಸುವ ಸಾಹಸಕ್ಕೆ ಕೈಹಾಕಿದ್ದಾರೆ.

‘ಈ ಚಿತ್ರದಲ್ಲಿ ನಾನು ನಕ್ಷತ್ರ ಎನ್ನುವ ಪಾತ್ರ ನಿರ್ವಹಿಸಿದ್ದೇನೆ. ನಕ್ಷತ್ರ ತುಂಬ ಆ್ಯಟಿಟ್ಯೂಡ್‌ ಇರುವ ಹುಡುಗಿ. ಯಶಸ್ಸು, ಕೀರ್ತಿ, ಹಣ ಈ ಮೂರೂ ಒಟ್ಟಿಗೆ ಸಿಕ್ಕಾಗ ಆಕೆ ಯಾರಿಗೂ ಅಂಜದೆ ದರ್ಪದಿಂದ ಹೇಗೆ ಮೆರೆಯುತ್ತಾಳೆ ಎಂಬುದನ್ನು ಈ ಪಾತ್ರದ ಮೂಲಕ ತೋರಿಸಲಾಗಿದೆ. ನನ್ನ ಅಭಿನಯಕ್ಕೆ ಸವಾಲೊಡ್ಡುವ ಪಾತ್ರವಾಗಿ ನಾನು ಇದನ್ನು ಸ್ವೀಕರಿಸಿದೆ. ಅದನ್ನು ನಾನು ತುಂಬಾ ಚೆನ್ನಾಗಿ ನಿಭಾಯಿಸಿದ್ದೇನೆ. ಆ್ಯಪಲ್‌ ಕೇಕ್‌ ಚಿತ್ರದ ಚಿತ್ರೀಕರಣವನ್ನು ಮಂಗಳೂರು, ಬೆಂಗಳೂರು ಮತ್ತು ಮಂಡ್ಯ ಸೇರಿದಂತೆ ವಿವಿಧೆಡೆ ಚಿತ್ರೀಕರಿಸಲಾಗಿದೆ. ಇನ್ನು ಚಿತ್ರದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ’ಎನ್ನುತ್ತಾರೆ ಶುಭಾ ರಕ್ಷಾ.

‘ಸಿನಿಮಾ ಕಲಾವಿದರಾಗಬೇಕು ಎಂಬ ಕನಸನ್ನು ಕಟ್ಟಿಕೊಂಡು ಸಾವಿರಾರು ಮಂದಿ ಗಾಂಧಿನಗರಕ್ಕೆ ಬರುತ್ತಾರೆ. ಸಿನಿಮಾ ಮೋಹ ಇಟ್ಟುಕೊಂಡು ಬರುವ ಎಲ್ಲರೂ ಇಲ್ಲಿ ಯಶಸ್ವಿಯಾಗುವುದಿಲ್ಲ. ನಾಯಕ, ನಾಯಕಿ, ಗಾಯಕ ಅಥವಾ ನಿರ್ದೇಶಕರಾಗಲು ಬಯಸುವ ಅನೇಕರು ಸೂಕ್ತ ಅವಕಾಶ ಸಿಗದೇ ಹಲವು ವರ್ಷಗಳವರೆಗೆ ತೆರೆಯ ಹಿಂದೆಯೇ ದುಡಿಯುವ ಅನಿವಾರ್ಯತೆಗೆ ಸಿಲುಕುತ್ತಾರೆ. ನಮಗೂ ಒಳ್ಳೆ ದಿನ ಬರುತ್ತದೆ ಎಂದು ಅವಕಾಶಕ್ಕಾಗಿ ಕಾಯುವ, ತೆರೆಯ ಹಿಂದೆ ದುಡಿಯುವ ಇಂತಹ ಅನೇಕ ಕಲಾವಿದರ ಕಷ್ಟ–ಕಾರ್ಪಣ್ಯವನ್ನು ತೆರೆಯ ಮೇಲೆ ತೋರಿಸುವುದು ನಿರ್ದೇಶಕರ ಉಮೇದು’ಎಂದು ಚಿತ್ರಕತೆಯ ಬಗ್ಗೆ ಹೇಳುತ್ತಾರೆ.

ರ್‌’ಚೆಲುವೆ ಶುಭಾ.ಆ್ಯಪಲ್‌ ಕೇಕ್‌ ಚಿತ್ರದ ಚಿತ್ರೀಕರಣ ಮುಗಿಸಿರುವ ಶುಭಾ ಈಗ‘ಹೈಪರ್‌’ಎಂಬ ಕನ್ನಡ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ಇದರ ಜತೆಗೆ ಬಿಗ್‌ಬಾಸ್‌ ಖ್ಯಾತಿಯ ನಿರಂಜನ್‌ ದೇಶಪಾಂಡೆ ಅವರ ಸಿನಿಮಾದಲ್ಲೂ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐವರು ನಾಯಕಿಯರಿದ್ದು, ಬಿಗ್‌ಬಾಸ್‌ ಖ್ಯಾತಿಯ ಸಂಜನಾ ಕೂಡಾ ಅವರಲ್ಲೊಬ್ಬರು.

ಈ ನಡುವೆ, ಶುಭಾ ಅವರು ಕಾಣಿಸಿಕೊಂಡಿರುವ ಹಿಂದಿ ಆಲ್ಬಂ ಸಖತ್‌ ಸದ್ದು ಮಾಡುತ್ತಿದೆ. ಈ ಕುರಿತು ಶುಭಾ ಹೇಳುವುದು ಹೀಗೆ: ‘ಬತಾದೆ ಕುದಾ’ಅಂತ ಹೇಳಿ ಒಂದು ಹಿಂದಿ ಆಲ್ಬಂ ಸಾಂಗ್ ಅನ್ನು ಇತ್ತೀಚೆಗಷ್ಟೇ ಮಾಡಿ ಮುಗಿಸಿದೆ. ಈ ಸಾಂಗ್‌ ತುಂಬಾ ರೊಮ್ಯಾಂಟಿಕ್‌ ಆಗಿ ಮೂಡಿಬಂದಿದೆ. ಈ ಗೀತೆಯ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳೂ ಕೇಳಿಬಂದಿವೆ.

ಈ ಆಲ್ಬಂನಲ್ಲಿ ಮುಂಬೈನ ಸೂಪರ್ ಮಾಡೆಲ್ ಆರ್ಯ ನನ್ನ ಜತೆ ಕಾಣಿಸಿಕೊಂಡಿದ್ದಾರೆ. ರಾಜೇಶ್ ಕುಮಾರ್ ಮತ್ತು ದೀಪಕ್ ಎಂಬುವವರು ಈ ಆಲ್ಬಂನ ನಿರ್ದೇಶಕರು. ಗೀತೆಯನ್ನು ಮುಂಬೈ, ಗೋವಾ ಮತ್ತು ಗೋಕರ್ಣದ ಸುಂದರ ಕಡಲ ಕಿನಾರೆಯಲ್ಲಿ ಚಿತ್ರೀಕರಿಸಲಾಗಿದೆ. ಅಂದ ಹಾಗೆ ಶುಭಾ ರಕ್ಷಾ ಸದ್ಯದಲ್ಲೇ ಕಾಲಿವುಡ್‌ ಅಂಗಳಕ್ಕೂ ಜಿಗಿಯುತ್ತಿದ್ದಾರಂತೆ. ಹಾಗಂತ ಅವರೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT