ಭಾನುವಾರ, ಡಿಸೆಂಬರ್ 8, 2019
21 °C

ಕಮಲ್ ಮಗಳು ಅಕ್ಷರಾ ಕನ್ನಡಕ್ಕೆ

Published:
Updated:
ಕಮಲ್ ಮಗಳು ಅಕ್ಷರಾ ಕನ್ನಡಕ್ಕೆ

ನಟ ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರಾ ಹಾಸನ್ ಕನ್ನಡ ಸಿನಿಮಾದಲ್ಲಿ ಅಭಿನಯಿಸುವುದು ಖಚಿತವಾಗಿದೆ.

ನಾಗಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ರವಿಚಂದ್ರನ್‌ ಮಗ ವಿಕ್ರಮ್‌ ನಾಯಕನಾಗಿ ಅಭಿನಯಿಸಲಿದ್ದಾರೆ. ಕನ್ನಡ ಹಾಗೂ ತಮಿಳು ಬಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಅಕ್ಷರಾ ಈಗಾಗಲೇ ಕಥೆಯನ್ನು ಕೇಳಿದ್ದು, ಕಥೆ ಇಷ್ಟವಾಗಿದೆಯಂತೆ. ಈ ಸಿನಿಮಾದ ಪಾತ್ರ ಅಕ್ಷರಾ ಅವರಿಗೆ ಸೂಕ್ತವಾಗಿ ಹೊಂದುತ್ತದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಲಿದ್ದು ಆರ್.ಎಸ್. ಪ್ರೊಡಕ್ಷನ್‌ ಸಂಸ್ಥೆಯಿಂದ  ಸಿನಿಮಾ ನಿರ್ಮಾಣವಾಗಲಿದೆ.

ಪ್ರತಿಕ್ರಿಯಿಸಿ (+)