ಸೋಮವಾರ, ಡಿಸೆಂಬರ್ 9, 2019
25 °C

ಶ್ರೀದೇವಿ ಸಂಜಯ್ ದತ್ ಮತ್ತೆ ತೆರೆಮೇಲೆ

Published:
Updated:
ಶ್ರೀದೇವಿ ಸಂಜಯ್ ದತ್ ಮತ್ತೆ ತೆರೆಮೇಲೆ

ಬರೋಬ್ಬರಿ ಇಪ್ಪತ್ತೈದು ವರ್ಷಗಳ ಬಳಿಕ ನಟಿ ಶ್ರೀದೇವಿ ಮತ್ತು ನಟ ಸಂಜಯ್ ದತ್ ಬೆಳ್ಳಿತೆರೆ ಮೇಲೆ ಕಾಣಿಸಿ ಕೊಳ್ಳಲಿದ್ದಾರೆ.

ಅಭಿಷೇಕ್ ವರ್ಮನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಶ್ರೀದೇವಿ ಮತ್ತು ಸಂಜಯ್ ದತ್ ಒಟ್ಟಿಗೆ ನಟಿಸಲಿದ್ದಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಮಹೇಶ್ ಭಟ್‌ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಸಿನಿಮಾ ’ಗುಮ್ರಾಹ್‌’ದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.

ಹೊಸ ಸಿನಿಮಾದ ಚಿತ್ರಕಥೆಗೆ ಅಂತಿಮ ರೂಪ ನೀಡಿರುವ ನಿರ್ದೇಶಕ ಅಭಿಷೇಕ್, ಸಿನಿಮಾಕ್ಕೆ ಖಳನಾಯಕ್ ಅಥವಾ ಸಿದ್ದತ್ ಎಂದು ಹೆಸರಿಡುವ ಬಗ್ಗೆ ಗೊಂದಲದಲ್ಲಿದ್ದಾರಂತೆ. ಅಂದ ಹಾಗೆ ಈ ಸಿನಿಮಾದಲ್ಲಿ ಶ್ರೀದೇವಿ, ಸಂಜಯ್ ದತ್ ಜತೆಗೆ, ಅಲಿಯಾ ಭಟ್, ವರುಣ್ ಧವನ್, ಸೋನಾಕ್ಷಿ ಸಿನ್ಹಾ ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)