ಬುಧವಾರ, ಡಿಸೆಂಬರ್ 11, 2019
20 °C

ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಗೆ ಪ್ರವಾಹ, ಭೂಕುಸಿತ: ಕಾಜಿರಂಗ ರಾಷ್ಟ್ರೀಯ ಉದ್ಯಾನ ಜಲಾವೃತ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಗೆ ಪ್ರವಾಹ, ಭೂಕುಸಿತ: ಕಾಜಿರಂಗ ರಾಷ್ಟ್ರೀಯ ಉದ್ಯಾನ ಜಲಾವೃತ

ಇಟಾನಗರ, ಇಂಫಾಲ: ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಹಾಗೂ ಭೂ ಕುಸಿತ ಸಂಭವಿಸಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಮನೆಗಳಿಗೆ ಹಾನಿಯಾಗಿದೆ. ಜನರು ನೆಲೆ ಇಲ್ಲದೆ ಪರದಾಡುವಂತಾಗಿದೆ.

ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ರಸ್ತೆಗಳು ಮುಳುಗಡೆಯಾಗಿವೆ, ಹಲವು ಪ್ರದೇಶಗಳು ನೀರಿನಿಂದಾವೃತವಾಗಿ ನಡುಗಡ್ಡೆಯಂತಾಗಿದ್ದು, ಸಂಪರ್ಕ ಕಡಿದುಕೊಂಡಿವೆ.

ರಾಷ್ಟ್ರೀಯ ಹೆದ್ದಾರಿ– 415ರಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಸಂಪರ್ಕ ಕಡಿತಗೊಂಡಿದೆ. ನಿನ್ನೆ ಸಂಜೆ ಇಟಾನಗರದ ಸಮೀಪ ಮೂರು ವರ್ಷದ ಮಗುವೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ.

ಇಫಾಲ–ಜೈರಿ ಮಧ್ಯೆ ಎನ್‌ಎಚ್‌–37 ಭೂಕುಸಿತದಿಂದ 200 ಮೀಟರ್‌ನಷ್ಟು ಹಾನಿಯಾಗಿದೆ. ನಾಗಲ್ಯಾಂಡ್‌ನ ಕೊಹಿಮಾ–ದಿಮ್‌ಪುರ ಮಧ್ಯೆ ರಸ್ತೆ ಕುಸಿದಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನ ಜಲಾವೃತ

ಗುವಾಹಟಿಯಿಂದ 250 ಕಿ.ಮೀ. ದೂರದಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ ಭಾರಿ ಪ್ರವಾಹದಿಂದಾಗಿ ಜಲಾವೃತಗೊಂಡಿದೆ. ಘೇಂಡಾಮೃಗ ಸೇರಿದಂತೆ ನೂರಾರು ಪ್ರಾಣಿಗಳು ಅಪಾಯದಲ್ಲಿವೆ.

ಘೇಂಡಾಮೃಗಗಳು ನಡುಗಡ್ಡೆಯಾಗಿರುವ ಎತ್ತರದ ಸ್ಥಳಗಳಲ್ಲಿ ಗುಂಪುಗೂಡಿವೆ. ಇನ್ನು ಜಿಂಕೆಗಳು ಪ್ರವಾಹದಲ್ಲಿ ಈಜಿ ಸುರಕ್ಷಿತ ಸ್ಥಳಕ್ಕೆ ಸೇರಲು ಯತ್ನಿಸಿವೆ.

ಘೇಂಡಾಮೃಗಗಳು, ಜಿಂಕೆಗಳು, ಹೆಬ್ಬಾವು, ಮುಳ್ಳುಹಂದಿ, ಕಾಡೆಮ್ಮೆಗಳು ಸೇರಿದಂತೆ ಉದ್ಯಾನದಲ್ಲಿನ ಪ್ರಾಣಿಗಳು ಅಪಾಯದಲ್ಲಿವೆ.

ಪ್ರತಿಕ್ರಿಯಿಸಿ (+)