ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸುಲ್‌ನಲ್ಲಿ ಸೋಲು: ನದಿಗೆ ಹಾರಿದ ಐಎಸ್ ಉಗ್ರರು

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಮೋಸುಲ್‌ (ರಾಯಿಟರ್ಸ್‌): ತಮ್ಮ ವಶದಲ್ಲಿದ್ದ ಮೋಸುಲ್‌ ಪಟ್ಟಣದ ಕೊನೆಯ ಭಾಗದಲ್ಲಿಯೂ ಇರಾಕ್‌ ಪಡೆಗಳಿಂದ ತೀವ್ರ ಸೋಲು ಅನುಭವಿಸಿದ ಐಎಸ್‌ ಉಗ್ರರು ತಪ್ಪಿಸಿಕೊಳ್ಳಲು ಟೈಗ್ರಿಸ್‌ ನದಿಗೆ ಹಾರಿದ್ದಾರೆ.

ಇರಾಕ್‌ ಪಡೆಗಳು ಮೋಸುಲ್‌ ತಲುಪಿವೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಟೈಗ್ರಿಸ್‌ ನದಿಗೆ ಹೊಂದಿಕೊಂಡಿರುವ ಭಾಗವನ್ನು ಹೊರತುಪಡಿಸಿ ಮೋಸುಲ್‌ನ ಬಹುತೇಕ ಎಲ್ಲ ಭಾಗಗಳನ್ನೂ ಇರಾಕ್‌ ಪಡೆಗಳು ಐಎಸ್‌ ಉಗ್ರರ ವಶದಿಂದ ಮುಕ್ತಗೊಳಿಸಿವೆ.

ಎರಡೂ ಕಡೆಯಿಂದ ವೈಮಾನಿಕ ದಾಳಿಗಳು ನಡೆದಿವೆ. ನಗರದಲ್ಲಿ ದಟ್ಟ ಹೊಗೆ ಆವರಿಸಿತ್ತು. ರಸ್ತೆಗಳಲ್ಲಿ ಐಎಸ್‌ ಉಗ್ರರ ಕೊಳೆಯುತ್ತಿರುವ ಶವಗಳು ಕಂಡುಬಂದವು. 

30 ಉಗ್ರರ ಹತ್ಯೆ: ಟೈಗ್ರಿಸ್‌ ನದಿ ಮಾರ್ಗವಾಗಿ ಈಜಿ ತಪ್ಪಿಸಿಕೊಳ್ಳಲು ಯತ್ನಿಸಿದ 30 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್‌ ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಯಾಹ್ಯಾ ರಸೂಲ್‌ ಸರ್ಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಭಯೋತ್ಪಾದನಾ ನಿಗ್ರಹ ಪಡೆ ಟೈಗ್ರಸ್‌ ನದಿ ತಟದಲ್ಲಿ ಇರಾಕ್‌ ಬಾವುಟ ಹಾರಿಸಿದೆ’ ಎಂದು ಸುದ್ದಿಸಂಸ್ಥೆ  ತಿಳಿಸಿದೆ.

ಮೋಸುಲ್‌ನಲ್ಲಿ ‘ಸಾಯುವವರೆಗೂ ಹೋರಾಡುತ್ತೇವೆ’ ಎಂದು ಐಎಸ್‌ ಉಗ್ರರು ಶನಿವಾರ ಶಪಥ ಮಾಡಿದ್ದರು.  ಕಳೆದ ಎಂಟು ತಿಂಗಳಿಂದ ನಡೆಯುತ್ತಿದ್ದ ಯುದ್ಧದಲ್ಲಿ ಮೋಸುಲ್‌ನ ಬಹುಭಾಗ ನಾಶವಾಗಿದ್ದು, ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಅಂದಾಜು 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT