ಶುಕ್ರವಾರ, ಡಿಸೆಂಬರ್ 6, 2019
20 °C

ಜಯದ ಹಂಬಲವಿಲ್ಲದೆ ಅಂಗಳಕ್ಕೆ ಇಳಿದ ತಂಡ: ಕೊಹ್ಲಿ ಬೇಸರ

Published:
Updated:
ಜಯದ ಹಂಬಲವಿಲ್ಲದೆ ಅಂಗಳಕ್ಕೆ ಇಳಿದ ತಂಡ: ಕೊಹ್ಲಿ ಬೇಸರ

ಕಿಂಗ್ಸ್‌ಟನ್‌, ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ರಾತ್ರಿ ನಡೆದ ಏಕೈಕ  ಟಿ–20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಯಕ ವಿರಾಟ್ ಕೊಹ್ಲಿ ತಂಡದ ಆಟ ಗಾರರು ಜಯದ ಹಂಬಲ ಇಲ್ಲದೇ ಅಂಗಳಕ್ಕೆ ಇಳಿದಿದ್ದರು ಎಂದು ದೂರಿದ್ದಾರೆ.

ಪಂದ್ಯದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ಎಲ್ಲ ವಿಭಾಗದಲ್ಲೂ ಭಾರತ ಕಳಪೆ ಆಟ ಆಡಿತು. ನಿರೀಕ್ಷೆಗೆ ತಕ್ಕ ಮೊತ್ತ ಗಳಿಸಲು ಸಾಧ್ಯವಾಗದೆ ಬ್ಯಾಟ್ಸ್‌ಮನ್‌ಗಳು ಮರಳಿದರು. ಆರಂಭದಲ್ಲಿ ಬೌಲಿಂಗ್ ಕೂಡ ಕಳಪೆಯಾಗಿತ್ತು. ಕ್ಯಾಚ್‌ಗಳನ್ನು ಕೈಚೆಲ್ಲಿ ಪಂದ್ಯವನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟೆವು’ ಎಂದರು.

ಪಂದ್ಯದಲ್ಲಿ ಭಾರತ 20 ಓವರ್‌ ಗಳಲ್ಲಿ ಆರು ವಿಕೆಟ್‌ಗಳಿಗೆ 190 ರನ್ ಗಳಿ ಸಿತ್ತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ 18.3 ಓವರ್‌ಗಳಲ್ಲಿ ಜಯ ಗಳಿಸಿತ್ತು. ಎವಿನ್‌ ಲೂಯಿಸ್‌ 62 ಎಸೆತಗಳಲ್ಲಿ 125 ರನ್‌ ಗಳಿಸಿ ಔಟಾಗದೇ ಉಳಿದಿ ದ್ದರು. 12 ಸಿಕ್ಸರ್‌ ಮತ್ತು ನಾಲ್ಕು ಬೌಂಡ ರಿಗಳನ್ನು ಅವರು ಚಚ್ಚಿದ್ದರು. ಆರು ಮತ್ತು ಏಳನೇ ಓವರ್‌ನಲ್ಲಿ ಕ್ರಮವಾಗಿ ಮಹಮ್ಮದ್ ಶಮಿ ಮತ್ತು ದಿನೇಶ್ ಕಾರ್ತಿಕ್‌ ಅವರು ಲೂಯಿಸ್ ಅವರ ಕ್ಯಾಚ್ ಕೈಚೆಲ್ಲಿದ್ದರು.

‘ಅವಕಾಶಗಳನ್ನು ಬಳಸಿಕೊಳ್ಳದಿ ದ್ದರೆ ಪಂದ್ಯದಲ್ಲಿ ಗೆಲುವು ಕಷ್ಟಸಾಧ್ಯ. 230ಕ್ಕೂ ಅಧಿಕ ರನ್ ಗಳಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಇದಕ್ಕೆ ಇರುವ ಅವಕಾಶವನ್ನು ಬಳಸಿಕೊಳ್ಳಲು ಆಗಲಿಲ್ಲ. ದಿನೇಶ್ ಕಾರ್ತಿಕ್‌ ಉತ್ತಮ ವಾಗಿ ಆಡಿದ್ದಾರೆ. ಆದರೆ ಯಾರಾದರೂ ಒಬ್ಬರು 80 ಅಥವಾ 90 ರನ್‌ ಗಳಿಸುವ ಅಗತ್ಯವಿತ್ತು. ಅದು ಸಾಧ್ಯವಾಗಲಿಲ್ಲ. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲೂ ಸಂದರ್ಭಕ್ಕೆ ತಕ್ಕಂತೆ ಆಡಲು ಆಗಲಿಲ್ಲ. ಇದೆಲ್ಲವೂ ಸೋಲಿಗೆ ಕಾರಣವಾಯಿತು’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

‘ಟ್ವೆಂಟಿ–20 ಕ್ರಿಕೆಟ್‌ಗೆ ಸಂಬಂಧಿಸಿ ವೆಸ್ಟ್‌ ಇಂಡೀಸ್‌ ಅತ್ಯುತ್ತಮ ತಂಡ. ಅವರು ನಿರ್ದಿಷ್ಟ ಆಟಗಾರರನ್ನು ಕೆಲವು ವರ್ಷಗಳಿಂದ ನಿರಂತರವಾಗಿ ಕಣಕ್ಕೆ ಇಳಿಸುತ್ತಿದ್ದಾರೆ. ನಮ್ಮ ತಂಡ ಇನ್ನೂ ಪರಿಪೂರ್ಣ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಏಳು–ಬೀಳುಗಳು ಕಂಡುಬರು ತ್ತಿವೆ’ ಎಂದು ಅವರು ಹೇಳಿದರು.

‘ಟ್ವೆಂಟಿ–20ಯಲ್ಲಿ ಗೆಲುವು ಯಾರಿಗೂ ಒಲಿಯಬಹುದು. ಒಂದು ಪಂದ್ಯದ ಸೋಲು ಅಥವಾ ಗೆಲುವಿ ನಿಂದ ತಂಡದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ’ ಎಂದ ಕೊಹ್ಲಿ ‘ವೆಸ್ಟ್ ಇಂಡೀಸ್‌  ಪ್ರವಾಸ ಖುಷಿ ನೀಡಿದೆ. ಏಕದಿನ ಸರಣಿಯಲ್ಲಿ ಒಂದು ಪಂದ್ಯ ಸೋತರೂ ಮೂರು ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದಿದ್ದೆವು’ ಎಂದರು.

ಪ್ರತಿಕ್ರಿಯಿಸಿ (+)