ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಲಯಕ್ಕೆ ಪ್ರಶಸ್ತಿ

ಎಸ್‌.ಎ. ಶ್ರೀನಿವಾಸನ್‌ ಸ್ಮಾರಕ ಕ್ರಿಕೆಟ್‌ ಟೂರ್ನಿ
Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಲಯ ತಂಡದವರು ಕೆಎಸ್‌ಸಿಎ ಆಶ್ರಯದ ಎಸ್‌.ಎ. ಶ್ರೀನಿವಾಸನ್‌ ಸ್ಮಾರಕ 23 ವರ್ಷದೊ ಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ನಡೆದ  ಮೊಫ್ಯುಸಲ್ ಇಲೆವನ್‌ ವಿರುದ್ಧದ ಫೈನಲ್‌ ಹೋರಾಟ ಡ್ರಾದಲ್ಲಿ ಅಂತ್ಯಕಂಡಿತು. ಹೀಗಾಗಿ ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಬೆಂಗಳೂರು ವಲಯ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ್ದ ಬೆಂಗಳೂರು ವಲಯ  63.2 ಓವರ್‌ಗಳಲ್ಲಿ 282 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಮೊಫ್ಯುಸಲ್  ಇಲೆವನ್‌ 54 ಓವರ್‌ಗಳಲ್ಲಿ 200 ರನ್‌ಗಳಿಗೆ ಹೋರಾಟ ಮುಗಿಸಿತ್ತು.

82ರನ್‌ಗಳ ಮುನ್ನಡೆ ಪಡೆದು ದ್ವಿತೀಯ ಇನಿಂಗ್ಸ್ ಶುರುಮಾಡಿದ್ದ ಬೆಂಗಳೂರ ವಲಯ 64 ಓವರ್‌ಗಳಲ್ಲಿ 9 ವಿಕೆಟ್‌ಗೆ 215ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌

ಬೆಂಗಳೂರು ವಲಯ: ಮೊದಲ ಇನಿಂಗ್ಸ್‌: 63.2 ಓವರ್‌ಗಳಲ್ಲಿ 282 (ಜಯೇಶ್‌ ಬಾಬು 71, ಅಭಿನವ್‌ ಮನೋಹರ್‌ 51, ಬಿ.ಆರ್‌. ಶರತ್‌ 28, ಎಸ್‌. ರಕ್ಷಿತ್‌ 24, ನಿತೇಶ್‌ ಸೆದೈ 26, ವೈಶಾಖ್‌ ವಿಜಯಕುಮಾರ್‌ 59; ಆನಂದ್‌ 66ಕ್ಕೆ3, ಪ್ರತೀಕ್‌ ಪಾಟೀಲ 86ಕ್ಕೆ2, ಎಂ.ಸಿ. ಕರಣ್‌ 48ಕ್ಕೆ3).

ದ್ವಿತೀಯ ಇನಿಂಗ್ಸ್‌: 64 ಓವರ್‌ಗಳಲ್ಲಿ 9 ವಿಕೆಟ್‌ಗೆ 215 ಡಿಕ್ಲೇರ್ಡ್‌ (ಮಸೂಕ್‌ ಹುಸೇನ್‌ 25, ಬಿ.ಆರ್‌. ಶರತ್‌ 20, ನಿತೇಶ್‌ ಸೆದೈ 27, ಅಭಿನವ್‌ ಮನೋ ಹರ್‌ 37, ರಜತ್‌ ಹೆಗ್ಡೆ ಔಟಾಗದೆ 52; ಜಿ.ಎಲ್‌. ಯಶಸ್‌ 33ಕ್ಕೆ4, ಎಸ್‌.ಜೆ. ನಿಕಿನ್‌ ಜೋಶ್‌ 18ಕ್ಕೆ3).

ಮೊಫ್ಯುಸಲ್ ಇಲೆವನ್‌: ಮೊದಲ ಇನಿಂಗ್ಸ್‌: 54 ಓವರ್‌ಗಳಲ್ಲಿ 200 (ಜಿ. ಮೊಹಮ್ಮದ್‌ ಅಜೀಮ್‌ 26, ಎಸ್‌.ಜೆ. ನಿಕಿನ್‌ ಜೋಸ್  43, ಎಂ.ಎಸ್‌. ಭಂಡಾಗೆ 39, ದರ್ಶನ್‌ ಪಾಟೀಲ 68, ವೈಶಾಖ್‌ ವಿಜಯಕುಮಾರ್‌ 46ಕ್ಕೆ5, ರಜತ್‌ ಹೆಗ್ಡೆ 53ಕ್ಕೆ3, ಬಿ.ಎಂ. ಶ್ರೇಯಸ್‌ 57ಕ್ಕೆ2).

ಫಲಿತಾಂಶ:  ಡ್ರಾ. ಬೆಂಗಳೂರು ವಲಯ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT