ಶುಕ್ರವಾರ, ಡಿಸೆಂಬರ್ 6, 2019
19 °C

ಮನು–ಸುಮೀತ್‌ ಆಕರ್ಷಣೆ

Published:
Updated:
ಮನು–ಸುಮೀತ್‌ ಆಕರ್ಷಣೆ

ಕ್ಯಾಲ್ಗರಿ: ಪುರುಷರ ಡಬಲ್ಸ್ ವಿಭಾಗದ ಹಾಲಿ ಚಾಂಪಿಯನ್‌ ಜೋಡಿ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ ಇಲ್ಲಿ ಆರಂಭವಾಗಲಿರುವ ಕೆನಡಾ ಓಪನ್ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಮಂಗಳವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಪರುಪಳ್ಳಿ ಕಶ್ಯಪ್ ಹಾಗೂ ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಭರವಸೆ ಹೊಂದಿದ್ದಾರೆ. ಸಿಂಗಪುರ ಓಪನ್  ಗೆದ್ದು ವಿಶ್ವಾಸ ದಲ್ಲಿರುವ ಸಾಯಿ ಪ್ರಣೀತ್  ಈ ಬಾರಿ ಇಲ್ಲಿ ಪ್ರಶಸ್ತಿ ಕನಸಿ ನೊಂದಿಗೆ ಆಡಲಿದ್ದಾರೆ.

ಮೂರನೇ ಶ್ರೇಯಾಂಕ ಹೊಂದಿ ರುವ ಮನು–ಸುಮೀತ್ ಜೋಡಿ ಈ ವರ್ಷದ ಹಲವು ಟೂರ್ನಿಗಳಲ್ಲಿ ಆರಂ ಭಿಕ ಸುತ್ತುಗಳಲ್ಲೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಜಪಾನ್‌ನ ಕೊಯಿ ಗೊಂಡೊ ಮತ್ತು ತಸುಯ ವಟನಬೆ ವಿರುದ್ಧ ಆಡಲಿದೆ.

16ನೇ ಶ್ರೇಯಾಂಕದ ಕಶ್ಯಪ್, ಡೇನಿಯಲ್ ವಿರುದ್ಧ ತಮ್ಮ ಸವಾಲು ಆರಂಭಿಸಲಿದ್ದಾರೆ.

ಇಂಡೊನೇಷ್ಯಾ ಸೂಪರ್ ಸರಣಿ ಟೂರ್ನಿಯಲ್ಲಿ ಲೀ ಚಾಂಗ್ ವಿ ಹಾಗೂ ಚೆನ್‌ ಲಾಂಗ್ ಅವರನ್ನು ಮಣಿಸಿದ್ದ ಪ್ರಣಯ್ ಇಲ್ಲಿ ಮೆಕ್ಸಿಕೊದ ಜಾಬ್‌ ಕ್ಯಾಸ್ಟಿಲ್ಲೊ ಅವರೊಂದಿಗೆ ಆಡಲಿದ್ದಾರೆ. 11ನೇ ಶ್ರೇಯಾಂಕದ ಹರ್ಷಿಲ್ ದಾನಿ ಫ್ರಾನ್ಸ್‌ನ ಲೂಕಸ್ ಕಾರ್ವಿ ಮೇಲೆ ಆಡಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ  ರಿತು ಪರ್ಣಾ ಜಪಾನ್‌ನ ಹರುಕೊ ಸುಜುಕಿ ಮೇಲೂ, ರುತ್ವಿಕಾ ಕೊರಿಯಾದ ಇಯಾನ್ ಕಿಮ್ ವಿರುದ್ಧವೂ, ಉತ್ತೇ ಜಿತಾ ಕೆನಡಾದ ರಾಚೆಲ್ ಹೊಂಡೆರಿಚ್ ಎದುರೂ ಆಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಫ್ರ್ಯಾನ್ಸಿಸ್‌ ಅಲ್ವಿನ್ ಮತ್ತು ತರುಣ್ ಕೋನಾ, ಡೇನಿಯಲ್ ಬೆಂಜ್ ಮತ್ತು ಆ್ಯಂಡ್ರೆಸ್ ಹೆನ್ಜ್ ಸವಾಲು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಕುಹೂ ಜಾರ್ಜ್ ಮತ್ತು ನಿಂಗಶಿ ಬ್ಲಾಕ್ ಹಜಾ ರಿಕಾ  ಬಲ್ಗೇರಿಯಾದ ಗ್ಯಾಬ್ರಿಯೆಲಾ ಸ್ಟೊಯೆವಾ ಮತ್ತು ಸ್ಟಿಫನಿ ಸ್ಟೊಯೆವಾ ಮೇಲೆ ಆಡಲಿದ್ದಾರೆ. ಮೇಘನಾ ಜಕ್ಕಮ್‌ಪುಡಿ ಮತ್ತು ಎಸ್‌.  ಪೂರ್ವೀಶಾ   ಜೋಡಿಯು ಜಪಾನ್‌ನ ಅರಿಸಾ ಮತ್ತು ಕೀ ನಕಾನಿಶಿ ವಿರುದ್ಧ ಆಡಲಿದೆ.

ಮಿಶ್ರ ಡಬಲ್ಸ್‌ನಲ್ಲಿ ಎನ್‌. ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಜೆರಿ ಚೋಪ್ರಾ ಪೆರುವಿನ ಡೇನಿಯಲ್ ಲಾ ಮತ್ತು ಡಾನಿಕಾ ನಿಶಿಮುರಾ ಮೇಲೆ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)