ಶನಿವಾರ, ಡಿಸೆಂಬರ್ 7, 2019
16 °C

ಹಾಕಿ: ಫೈನಲ್‌ಗೆ ಲಗ್ಗೆ ಇಟ್ಟ ಸೇಂಟ್‌ ಜೋಸೆಫ್‌ ಬಾಲಕರ ಶಾಲೆ

Published:
Updated:
ಹಾಕಿ: ಫೈನಲ್‌ಗೆ  ಲಗ್ಗೆ ಇಟ್ಟ  ಸೇಂಟ್‌ ಜೋಸೆಫ್‌ ಬಾಲಕರ ಶಾಲೆ

ಬೆಂಗಳೂರು: ವರುಣ್‌ ಮುತ್ತಪ್ಪ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢಶಾಲೆ ತಂಡ ಎರಿಕ್‌ ವಾಜ್‌ ಸ್ಮಾರಕ ಜೂನಿಯರ್‌ ಹಾಕಿ ಟೂರ್ನಿಯಲ್ಲಿ  ಫೈನಲ್‌ ತಲುಪಿದೆ.

ಸೋಮವಾರ ನಡೆದ ಸೆಮಿಫೈನಲ್‌ ನಲ್ಲಿ ಸೇಂಟ್‌ ಜೋಸೆಫ್‌ ಶಾಲೆ 1–0 ಗೋಲಿನಿಂದ ಫ್ರಾಂಕ್‌ ಅಂಥೋಣಿ ಪಬ್ಲಿಕ್‌ ಶಾಲೆ ತಂಡವನ್ನು ಸೋಲಿಸಿತು.

ವಿಜಯಿ ತಂಡದ ವರುಣ್‌ ಅವರು 14ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮಿಂಚಿದರು.

ಪ್ರಶಸ್ತಿ ಸುತ್ತಿಗೆ ಬಾಲ್ಡ್‌ವಿನ್ಸ್‌: ಸೆಂಟೆನರಿ ಶೀಲ್ಡ್‌ಗಾಗಿ ನಡೆಯುತ್ತಿರುವ ಸೀನಿಯರ್‌ ವಿಭಾಗದ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಾಲ್ಡ್‌ವಿನ್ಸ್‌ ಶಾಲೆ 1–0 ಗೋಲಿನಿಂದ ಫ್ರಾಂಕ್‌ ಅಂಥೋಣಿ ಪಬ್ಲಿಕ್‌ ಶಾಲೆಯ ವಿರುದ್ಧ ಗೆದ್ದಿತು.

ಇನ್ನೊಂದು ಪಂದ್ಯ ದಲ್ಲಿ ವಿದ್ಯಾಶಿಲ್ಪಿ ಅಕಾಡೆಮಿ 2–1 ಗೋಲುಗಳಿಂದ ಸೇಂಟ್‌ ಜೋಸೆಫ್‌  ಪ್ರೌಢಶಾಲೆ ತಂಡವನ್ನು ಮಣಿಸಿತು.

ಪ್ರತಿಕ್ರಿಯಿಸಿ (+)