ಸೋಮವಾರ, ಡಿಸೆಂಬರ್ 16, 2019
25 °C

ಅಂಗವಿಕಲ ಶಿಕ್ಷಕರ ಮೀಸಲು ಭರ್ತಿ ಹೈಕೋರ್ಟ್ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲ ಶಿಕ್ಷಕರ ಮೀಸಲು ಭರ್ತಿ ಹೈಕೋರ್ಟ್ ನೋಟಿಸ್‌

ಬೆಂಗಳೂರು: ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕ ಎಂ.ಆರ್.ಹಿರೇಮಠ ಅವರಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಬೀದರ್‌ನ ಮಲ್ಲಿಕಾರ್ಜುನ ರೇವಣಸಿದ್ದಪ್ಪ ಹಾದಿಮನಿ ಸಲ್ಲಿಸಿರುವ  ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಪಟೇಲ್‌ ಹಾಗೂ ಎಸ್‌.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅಂಗವಿಕಲರಿಗೆ ಮೀಸಲಾದ ಸೀಟುಗಳ ಭರ್ತಿಗೆ ‘ಅಂಗವಿಕಲರ ಆದಿನಿಯಮದ ಆಯುಕ್ತ’ರು 2015ರಲ್ಲಿ  ನೀಡಿದ ಆದೇಶ ಜಾರಿಗೆ ಬಂದಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ.

ಪ್ರತಿಕ್ರಿಯಿಸಿ (+)