ಸೋಮವಾರ, ಡಿಸೆಂಬರ್ 16, 2019
26 °C

‘ತಂಬಾಕು ಬೇಡ’ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಂಬಾಕು ಬೇಡ’ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಬೆಂಗಳೂರು: ಕರ್ನಾಟಕ ಅಂಚೆ ವೃತ್ತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ‘ತಂಬಾಕು ಬೇಡ’ ಎಂಬ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಪ್ರಾಂತ್ಯದ ಪೋಸ್ಟ್‌ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌ ಲಕೋಟೆಯನ್ನು ಬಿಡುಗಡೆ ಮಾಡಿದರು.

ತಿಳಿ ಹಸಿರು ಹಾಗೂ ಬಿಳಿ ಬಣ್ಣದಿಂದ ಕೂಡಿರುವ ಲಕೋಟೆಯ ಮೇಲೆ ‘ತಂಬಾಕು ಬೇಡ’ ಹಾಗೂ ಹಿಂಭಾಗದಲ್ಲಿ ‘ತಂಬಾಕು ಬೇಡ, ಜೀವನ ಬೇಕು’ ಎಂಬ ವಾಕ್ಯಗಳನ್ನು ಮುದ್ರಿಸಲಾಗಿದೆ. ಗರ್ಭಿಣಿಯು ಧೂಮಪಾನ ಮಾಡುವುದರಿಂದ ಭ್ರೂಣದ ಮೇಲೆ ಪರಿಣಾಮ ಬೀರುವ ಚಿತ್ರವಿದೆ. ಈ ಲಕೋಟೆ ಬೆಲೆ ₹20.

ಪ್ರತಿಕ್ರಿಯಿಸಿ (+)