ಶನಿವಾರ, ಡಿಸೆಂಬರ್ 7, 2019
25 °C

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಯೋಗ

ನವದೆಹಲಿ: ಎಂಜಿನಿಯರಿಂಗ್‌ ಮತ್ತು ಇತರ ತಾಂತ್ರಿಕ ಕೋರ್ಸ್‌ಗಳ ವಿದ್ಯಾರ್ಥಿಗಳು ಪದವಿ ಪಡೆಯಬೇಕಿದ್ದರೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಕಡ್ಡಾಯ.

ಗುರುತಿಸಲಾದ ಐದು ಪಠ್ಯೇತರ ಚಟುವಟಿಕೆಗಳಲ್ಲಿ ಒಂದರಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹೇಳಿದೆ. ದೇಶ ಮತ್ತು ಸಮಾಜದ ಬಗೆಗಿನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಗ, ಎನ್‌ಸಿಸಿ, ಎನ್‌ಎಸ್‌ಎಸ್‌, ಉನ್ನತ ಭಾರತ ಅಭಿಯಾನ ಮತ್ತು ಕ್ರೀಡೆ ಎಐಸಿಟಿಇ ನಿಗದಿಪಡಿಸಿರುವ ಐದು ಚಟುವಟಿಕೆಗಳು.

ಕಾಲೇಜುಗಳು ಪ್ರತಿವಾರ ಈ ಚಟುವಟಿಕೆಗಳನ್ನು  ಮತ್ತು ಅದರಲ್ಲಿ  ವಿದ್ಯಾರ್ಥಿಯು ಕನಿಷ್ಠ ಶೇ 25ರಷ್ಟು ಹಾಜರಾತಿ ಹೊಂದಿರಬೇಕು.

ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗೆ ಹೆಚ್ಚುವರಿ ಅಂಕ ದೊರೆಯುವುದಿಲ್ಲ. ಭಾಗವಹಿಸದೇ ಇದ್ದರೆ ಅಥವಾ ಕನಿಷ್ಠ ಹಾಜರಾತಿ ಇಲ್ಲದಿದ್ದರೆ ಅಂತಹವರಿಗೆ ಪದವಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ.

ಪಠ್ಯೇತರ ಚಟುವಟಿಕೆಗಳು ಐಚ್ಛಿಕವಾಗಿದ್ದವು. ಈ ವರ್ಷದಿಂದ ಅವು ಕಡ್ಡಾಯವಾಗಿವೆ ಎಂದು ಎಐಸಿಟಿಇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯೋಗ ಮತ್ತು ಮೌಲ್ಯ ಶಿಕ್ಷಣವನ್ನು ಉನ್ನತ ಶಿಕ್ಷಣದ ಭಾಗವಾಗಿಸುವ ಕೇಂದ್ರ ಸರ್ಕಾರದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ವೃತ್ತಿಪರರಷ್ಟೇ ಅಲ್ಲ, ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)