ಶನಿವಾರ, ಡಿಸೆಂಬರ್ 7, 2019
16 °C

ವಿದ್ಯುತ್‌ ವ್ಯತ್ಯಯದಿಂದ ಜನರ ಪಡಿಪಾಟಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್‌ ವ್ಯತ್ಯಯದಿಂದ ಜನರ ಪಡಿಪಾಟಲು

ಬೆಂಗಳೂರು: ನಗರದ ಹೆಣ್ಣೂರು ಮತ್ತು ಬಾಣಸವಾಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು.

ಬೆಳಿಗ್ಗೆ 3.30ರಿಂದ ಸಂಜೆ 4ರವರೆಗೆ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದ್ದರಿಂದ ಜನರು ಅಡುಗೆ ಮಾಡಲು, ನೀರು ಬೀಸಿ ಮಾಡಲು ಮತ್ತು ಬಟ್ಟೆ ಒಗೆಯಲು ಪರದಾಡುವಂತಾಯಿತು.

‘ಹೆಬ್ಬಾಳದ ಆನಂದನಗರದಲ್ಲಿ ವಿದ್ಯುತ್‌ ಸರಬರಾಜಿನ ಕಂಡಕ್ಟರ್‌ ತುಂಡಾಗಿದ್ದರಿಂದ ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ’ ಎಂದು ಬೆಸ್ಕಾಂನ ಎಂಜಿನಿಯರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)