ಶನಿವಾರ, ಡಿಸೆಂಬರ್ 7, 2019
24 °C

ಟಗರು ಚಿತ್ರತಂಡದಿಂದ ಪೊಲೀಸರ ನಿಧಿಗೆ ₹ 1 ಲಕ್ಷ ದೇಣಿಗೆ

Published:
Updated:
ಟಗರು ಚಿತ್ರತಂಡದಿಂದ ಪೊಲೀಸರ ನಿಧಿಗೆ  ₹ 1 ಲಕ್ಷ ದೇಣಿಗೆ

ಬೆಂಗಳೂರು: ಪಾರ್ವತಮ್ಮ ರಾಜ್‌ಕುಮಾರ್‌ ಅವರ ನಿಧನದ ಹಿನ್ನೆಲೆಯಲ್ಲಿ ಶಿವರಾಜ್‌ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರೆ.

 ಈ ಹಿನ್ನೆಲೆಯಲ್ಲಿ ಟಗರು ಚಿತ್ರ ತಂಡ ಒಂದು ಲಕ್ಷ ರೂಪಾಯಿಗಳನ್ನು ಪೊಲೀಸರ ಕಲ್ಯಾಣ ನಿಧಿಗೆ  ದೇಣಿಗೆ ನೀಡಿದೆ.  ಟಗರು ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸುತ್ತಿದ್ದಾರೆ.  ಈ  ಚಿತ್ರ ಪೊಲೀಸರಿಗೆ ಸಂಬಂಧಿಸಿದ ಕಥಾವಸ್ತು ಹೊಂದಿದೆ.

ಒಂದು ಲಕ್ಷ ರೂಪಾಯಿ  ಚಕ್ ಅನ್ನು ಶಿವರಾಜ್‌ ಕುಮಾರ್‌  ಎ ಡಿ ಜಿ ಪಿ ಭಾಸ್ಕರ್ ರಾವ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ  ನಿರ್ದೇಶಕ ಸೂರಿ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಇದ್ದರು.

ಪ್ರತಿಕ್ರಿಯಿಸಿ (+)