ಬುಧವಾರ, ಡಿಸೆಂಬರ್ 11, 2019
24 °C

ವಾಹನ ನಿಲುಗಡೆ ವಿಚಾರದಲ್ಲಿ ಘರ್ಷಣೆ ಉಳ್ಳಾಲದಲ್ಲಿ ಟೆಂಪೊ ಚಾಲಕನಿಗೆ ಚೂರಿ ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ನಿಲುಗಡೆ ವಿಚಾರದಲ್ಲಿ ಘರ್ಷಣೆ ಉಳ್ಳಾಲದಲ್ಲಿ ಟೆಂಪೊ ಚಾಲಕನಿಗೆ ಚೂರಿ ಇರಿತ

ಬೆಂಗಳೂರು: ಇಲ್ಲಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಟೆಂಪೊ ಚಾಲಕರೊಬ್ಬರಿಗೆ ದುಷ್ಕರ್ಮಿಗಳು ಮಂಗಳವಾರ ಮಧ್ಯಾಹ್ನ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಸಮೀಪದ ಉಳಿಯ ನಿವಾಸಿಯಾಗಿರುವ ಟೆಂಪೊ ಚಾಲಕ ಆಸ್ಟಿನ್ (27) ಇರಿತದಲ್ಲಿ ಗಾಯಗೊಂಡವರು. ಇರಿತಕ್ಕೊಳಗಾದ ಚಾಲಕ ಟೆಂಪೊ ನಿಲುಗಡೆ ಮಾಡಿದ್ದು, ಹಿಂದಕ್ಕೆ ತೆಗೆಯುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಫೋರ್ಡ್ ಫಿಗೊ ಕಾರಿನಲ್ಲಿ ಬಂದವರು ವಾಹನ ಹಿಂದಕ್ಕೆ ತೆಗೆಯುವುದು ತಡವಾಯಿತೆಂದು ಆಕ್ಷೇಪಿಸಿ ಆಸ್ಟಿನ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.

ಘಟನೆ ವೇಳೆ ಕಾರಿನಲ್ಲಿದ್ದವರಲ್ಲಿ ಒಬ್ಬ ಆಸ್ಟಿನ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಮತ್ತೊಬ್ಬ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ. ಆಗ ಚಾಲಕ ಕೈ ಅಡ್ಡ ಹಿಡಿದಿದ್ದು, ಕೈಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ.ಶಾಂತರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)