ಸೋಮವಾರ, ಡಿಸೆಂಬರ್ 9, 2019
25 °C

ಹಿಮ್ಮೊಗ ಲಾಗ ಹಾಕಿ ಗಿನ್ನಿಸ್‌ ಪುಟಕ್ಕೆ

Published:
Updated:
ಹಿಮ್ಮೊಗ ಲಾಗ ಹಾಕಿ ಗಿನ್ನಿಸ್‌ ಪುಟಕ್ಕೆ

ನೀವು ಜಿಮ್ನಾಸ್ಟಿಕ್‌ ಕ್ರೀಡೆಯನ್ನು ನೋಡಿರಬಹುದು. ಮೈಯನ್ನು ಬಳ್ಳಿಯಂತೆ ಬಾಗಿಸಿ, ಜಿಗಿಯುವ ಪರಿ ನೋಡುಗರ ಮೈಜುಮ್ಮೆನ್ನಿಸುತ್ತದೆ. ಆದರೆ ಇಲ್ಲೊಬ್ಬ ಕ್ರೀಡಾಪಟು ಒಂದೇ ಕೈಯನ್ನು ನೆಲದ ಮೇಲೆ ಊರಿ ಹಿಮ್ಮೊಗವಾಗಿ ಲಾಗ ಹಾಕುತ್ತಾರೆ.

ದಕ್ಷಿಣ ಆಫ್ರಿಕಾದ‌ ಟೆಂಬಿಸದ ಜಿಮ್ನಾಸ್ಟಿಕ್‌ ಪಟು ಝಾಮಾ ಮೊಫೊಕೆಂಗ್‌ ಅವರು ನಿರಂತರವಾಗಿ 34 ಬಾರಿ ಹಿಮ್ಮೊಗವಾಗಿ ಲಾಗ ಹಾಕಿ ಗಿನ್ನೆಸ್‌ ವಿಶ್ವದಾಖಲೆ ಮಾಡಿದ್ದಾರೆ.

ಝಾಮಾ, 10 ವರ್ಷ ವಯಸ್ಸಿನಿಂದಲೇ ಜಿಮ್ನಾಸ್ಟಿಕ್‌ ಅಭ್ಯಾಸ ಮಾಡಿದವರು. ಒಂದು ಜಿಗಿತಕ್ಕೆ ಮೂರು ಸೆಕೆಂಡ್‌ಗೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

’ಇಂಥ ಸಾಹಸ ಮಾಡಲು ಮುಂದಾದಾಗ ಇದು ಒಳ್ಳೆಯದಲ್ಲ ಎಂಬುದು ಗೊತ್ತಿತ್ತು, ಆದರೂ ನಾನು ಅಭ್ಯಾಸ ಮಾಡಿದೆ, ಈಗ ಪರ್ಫೆಕ್ಟ್‌ ಆಗಿದ್ದೇನೆ’ ಎನ್ನುತ್ತಾರೆ ಝಾಮಾ.

ಮೂರ್ಛೆ ರೋಗದಿಂದ ಬಳಲುತ್ತಿರುವ ಝಾಮಾ, 13 ವರ್ಷದನಿದ್ದಾಗ ಒಂದು ಕೈಗೆ ಪೆಟ್ಟುಮಾಡಿಕೊಂಡರಂತೆ. ಆದರೂ ಜಿಮ್ನಾಸ್ಟಿಕ್‌ ಮೇಲಿನ ಸೆಳೆತ ಎಲ್ಲಾ ನೋವನ್ನೂ ಮರೆಮಾಚಿದೆ.

‘ನನ್ನ ಈ ಸಾಧನೆಯಿಂದ ಮಕ್ಕಳು ಜಿಮ್ನಾಸ್ಟಿಕ್‌ ಕ್ರೀಡೆಯೆಡೆಗೆ ಮುಖ ಮಾಡುತ್ತಾರೆ ಎಂಬ ನಂಬಿಕೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಝಾಮಾ.

ಪ್ರತಿಕ್ರಿಯಿಸಿ (+)