ಶುಕ್ರವಾರ, ಡಿಸೆಂಬರ್ 6, 2019
17 °C

ದೇಹ ದಂಡನೆ ಜಾನ್‌ಗೆ ಖುಷಿ

Published:
Updated:
ದೇಹ ದಂಡನೆ ಜಾನ್‌ಗೆ ಖುಷಿ

ಜಿಸ್ಮ್‌ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಜಾನ್‌ ಅಬ್ರಹಾಂ, ತಮ್ಮ ಕಟ್ಟುಮಸ್ತಿನ ದೇಹ, ಉದ್ದ ಕೂದಲ ಚಹರೆಯ ಮೂಲಕ ಇತರ ನಾಯಕರಿಗೆ ನಡುಕ ಹುಟ್ಟಿಸಿದವರು. ಅದಾಗಲೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದ, ಇವರು ಸಿನಿ ಕ್ಷೇತ್ರಗಳಲ್ಲಿ ಹಲವು ಸೋಲುಗಳನ್ನು ಕಂಡಿದ್ದಾರೆ. ಸಿನಿ ರಂಗದ ಏರಿಳಿತದ ನಡುವೆಯೂ ತಮ್ಮ ಸದೃಢ ಮೈಕಟ್ಟಿನಿಂದಲೇ ಅಭಿಮಾನಿಗಳನ್ನು ಗಳಿಸಿದ್ದಾರೆ. ದೇಶದ ಫಿಟ್‌ನೆಸ್‌ಗೊಂದು ಗುರುತು ಎಂಬಂತಿರುವ ಜಾನ್‌ ಅಬ್ರಹಾಂ ಡಯೆಟ್‌ ಸಾಕಷ್ಟು ಬೆವರು ಹರಿಸುತ್ತಾರೆ.

ಡಯೆಟ್‌ ವಿಷಯದಲ್ಲಿಯೂ ಇವರು ಕಟ್ಟುನಿಟ್ಟು. ಕಂಡ ಆಹಾರಗಳನ್ನೆಲ್ಲ ಮನಸ್ಸಿಗೆ ಬಂದಂತೆ ತಿನ್ನುವುದಿಲ್ಲ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆಹಾರಗಳಿಂದ ದೂರ ಇರುತ್ತಾರೆ. ಫಿಟ್‌ ಆಗಿರುವುದು ಮುಖ್ಯ. ದೇಹ ದಂಡಿಸುವುದು ಖುಷಿ ನೀಡುತ್ತದೆ. ಇದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ ಎಂದು ನಂಬಿದವರು ಇವರು.

ಪ್ರತಿದಿನ ಎರಡು, ಮೂರು ಗಂಟೆ ದೇಹ ದಂಡನೆಗೆ ಇವರು ಮೀಸಲಿಟ್ಟಿದ್ದಾರೆ. ಟ್ರೆಡ್‌ಮಿಲ್, ಕಾರ್ಡಿಯೊ, ಭಾರ ಎತ್ತುವ ವ್ಯಾಯಾಮಗಳನ್ನು ಮಾಡುತ್ತಾರೆ. ದೇಹ ದಂಡನೆ ನಂತರ ಅರ್ಧ ಗಂಟೆ ಜಾಗಿಂಗ್‌ ಮಾಡುತ್ತಾರೆ.

ಆಹಾರ ವಿಚಾರ: ಪ್ರೊಟೀನ್‌ಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡುತ್ತಾರೆ. ವರ್ಕೌಟ್‌ ನಂತರ ಆರರಿಂದ ಏಳು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ.

ಬೆಳಿಗ್ಗೆ ತಿಂಡಿಗೆ ತರಕಾರಿಗಳಿಂದ ಮಾಡಿದ ಪಾಸ್ತಾ, ಟೋಸ್ಟ್‌ ತಿನ್ನುತ್ತಾರೆ. ಮಧ್ಯಾಹ್ನ ಕ್ಯಾರೆಟ್‌, ರೋಟಿ, ತರಕಾರಿ ಪಲ್ಯ, ಮೀನು, ಮೊಸರು ಸೇವಿಸುತ್ತಾರೆ.

ಸಂಜೆ ಮೂರರಿಂದ ನಾಲ್ಕು ಮೊಟ್ಟೆಯ ಬಿಳಿ ಭಾಗ, ಸೇಬು, ಕಿತ್ತಳೆ, ಪಪ್ಪಾಯಿ ತಿನ್ನುತ್ತಾರೆ. ರಾತ್ರಿ ಜೋಳದ ರೊಟ್ಟಿ, ತರಕಾರಿ ಸಲಾಡ್‌ ತಿನ್ನುತ್ತಾರೆ.

ಒಂಬತ್ತು ಗಂಟೆಯ ಒಳಗೆ ರಾತ್ರಿ ಊಟ ಮಾಡುತ್ತಾರೆ. ಸಂಜೆ ಐದರ ನಂತರ ಮೊಸರು ಸೇವಿಸುವುದಿಲ್ಲ.

ಪ್ರತಿಕ್ರಿಯಿಸಿ (+)