ಬುಧವಾರ, ಡಿಸೆಂಬರ್ 11, 2019
25 °C

‘ಸಿಟ್ಟು ಬಂದ್ರೆ ಜೋರಾಗಿ ಕೂಗಾಡುತ್ತೇನೆ’

Published:
Updated:
‘ಸಿಟ್ಟು ಬಂದ್ರೆ ಜೋರಾಗಿ ಕೂಗಾಡುತ್ತೇನೆ’

ಸಿನಿಮಾ ನಟಿಯಾಗಬೇಕೆಂಬ ಬಯಕೆಯೊಂದಿಗೆ ಚಿಕ್ಕಮಗಳೂರಿನಿಂದ ಮಹಾನಗರಕ್ಕೆ ಬಂದವರು ಮೇಘನಾ ಲಕ್ಷ್ಮಣ್‌. ಒಂದೂವರೆ ವರ್ಷದಿಂದ ಮಾಡೆಲಿಂಗ್‌ ಮಾಡುತ್ತಿರುವ ಇವರು ‘ಐರಾ’ ಸಿನಿಮಾದ ನಟಿಯಾಗಿದ್ದಾರೆ. ಚಿತ್ರ ಬಿಡುಗಡೆಯ ಖುಷಿಯಲ್ಲಿರುವ ಮೇಘನಾ ‘ಗುಲ್‌ಮೊಹರ್‌’ನೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

* ರ‍್ಯಾಂಪ್‌ ವಾಕ್‌ ಮಾಡುವಾಗ ಎಡವಿಬಿದ್ದಿದ್ದೀರಂತೆ?

ಹೀಲ್ಸ್‌ ಹಾಕಿದಾಗ ಎಡವೋದು, ಬೀಳೋದು ಸಹಜ.ನನಗೂ ಹಾಗೇ ಆಯಿತು. ಒಂದು ಶೋನಲ್ಲಿ ಎಡವಿ ಬೀಳುತ್ತೇನೆ ಎನ್ನುವಷ್ಟರಲ್ಲಿ ಆತ್ಮಸ್ಥೈರ್ಯದಿಂದ ನಡೆದೆ, ಕ್ಯಾಮೆರಾ ಎದುರಿಸಿದೆ.

* ಸಿನಿಮಾ ಕ್ಷೇತ್ರಕ್ಕೆ ಬರಲು ಕಾರಣ?

ಸಿನಿ ತಾರೆಯಾಗಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅಪ್ಪನ ಹಂಗಿನಲ್ಲಿ ಎಷ್ಟು ದಿನ ಇರಲಿ, ನಾನೇ ದುಡಿದು, ಸ್ವತಂತ್ರವಾಗಿ ಬದುಕಬೇಕು ಎಂದು ಬೆಂಗಳೂರಿಗೆ ಬಂದೆ. ಐಟಿ ಕಂಪೆನಿ ಒಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿದೆ. ಇಷ್ಟವಿಲ್ಲದ ವೃತ್ತಿಯಲ್ಲಿ ಬಹಳ ದಿನ ಇರಲು ಆಗಲಿಲ್ಲ. ಮಾಡೆಲಿಂಗ್‌ಗೆ ಬಂದೆ. ವಾವ್‌ ಫೇರ್‌ನೆಸ್‌ ಕ್ರೀಂ, ಬಿಗ್‌ಬಜಾರ್‌, ಸ್ಯಾಮ್‌ಸಂಗ್‌ ಜಾಹೀರಾತುಗಳಿಗೆ ರೂ‍ಪದರ್ಶಿಯಾಗಿದ್ದೇನೆ. ಕೇರಳ ಫ್ಯಾಷನ್‌ ಲೀಗ್‌, ಮೈಸೂರು ಯುವ ದಸರಾ ಶೋಗಳಿಗೆ ಶೋ ಸ್ಟಾಪರ್‌ ಆಗಿಯೂ ವಾಕ್‌ ಮಾಡಿದ್ದೇನೆ.

* ನಿಮ್ಮ ಕನಸಿನ ಹುಡುಗ ಹೇಗಿರಬೇಕು?

ದೇವರಾಣೆ ಇನ್ನೂ ಆ ಬಗ್ಗೆ ಯೋಚನೆ ಮಾಡಿಲ್ಲ. ವೃತ್ತಿಬದುಕಿನ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ.

* ಡೇಟಿಂಗ್‌ ಮಾಡಲು ಅವಕಾಶ ಸಿಕ್ಕರೆ ಯಾವ ನಟರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ?

ನಾನು, ಅಪ್ಪ–ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗುವುದು. ಹಾಗಾಗಿ ಡೇಟಿಂಗ್‌ ಬಗ್ಗೆ ಆಸಕ್ತಿ ಇಲ್ಲ.

* ನಿಮ್ಮ ಮನೆಗೆ ಹೆಣ್ಣು ನೋಡಲು ಬರುವವರು, ನಿಮಗೆ ಹಾಡು ಹೇಳುವಂತೆ ಕೇಳಿದರೆ?

ಮುಂಚಿನ ರೀತಿ ಹಾಡು ಹೇಳು, ನಡೆದುಕೊಂಡು ಹೋಗು ಎಂಬೆಲ್ಲಾ ಪ್ರಶ್ನೆಗಳನ್ನು ಕೇಳುವಂತಿಲ್ಲ. ಹಾಗೇನಾದರೂ ಕೇಳಿದರೆ ಹುಡುಗ ಹಾಡಿದರೆ, ನಾನು ಕೋರಸ್‌ ಹಾಡುತ್ತೇನೆ ಎಂದು ಹೇಳುತ್ತೇನೆ.

* ತುಂಬಾ ಸಿಟ್ಟು ಬಂದ್ರೆ?

ಜೋರಾಗಿ ಕೂಗಾಡುತ್ತೇನೆ, ಅಳುತ್ತೇನೆ. ಸಿಟ್ಟು ಬರಲು ಕಾರಣರಾದವರನ್ನು ಬೈಯ್ಯುತ್ತೇನೆ.

* ನಿಮ್ಮಿಷ್ಟದ ತಿನಿಸು?

ರುಚಿಯಾಗಿರುವ ಎಲ್ಲಾ ತಿನಿಸುಗಳೂ ನನಗಿಷ್ಟ.

* ತುಂಬಾ ಇಷ್ಟಪಡುವ ಸ್ಥಳ?

ನಮ್ಮೂರು ಚಿಕ್ಕಮಗಳೂರು.

* ಯಾವ ಬಣ್ಣದ ಬಟ್ಟೆಗಳು ಇಷ್ಟವಾಗುತ್ತವೆ?

ನೀಲಿ ಮತ್ತು ಕಪ್ಪು

* ಯಾರನ್ನು ಹೆಚ್ಚು ಇಷ್ಟಪಡ್ತೀರಾ?

ಅಪ್ಪ.

* ಅಡುಗೆ ಮಾಡಲು ಬರುತ್ತದೆಯಾ?

ಹೌದು, ಚೆನ್ನಾಗಿ ಅಡುಗೆ ಮಾಡುತ್ತೇನೆ. ರಾಗಿಮುದ್ದೆ, ಅಕ್ಕಿ ರೊಟ್ಟಿ, ನೀರುದೋಸೆ ನನ್ನ ಫೇವರೆಟ್‌.

* ಡಯಟ್‌ ಮಾಡ್ತೀರಾ?

ಹೆಚ್ಚಾಗಿ ಕಲ್ಲಂಗಡಿ ಜ್ಯೂಸ್‌ ಕುಡಿಯುತ್ತೇನೆ, ಹಣ್ಣುಗಳನ್ನು ತಿನ್ನುತ್ತೇನೆ. ಮಾಮೂಲಿ ಊಟ ಮಾಡುತ್ತೇನೆ. ಹೆಚ್ಚಿನ ಡಯಟ್‌ ಏನೂ ಇಲ್ಲ.

* ವರ್ಕೌಟ್‌?

ಜಿಮ್‌ನಲ್ಲಿ ಒಂದು ಗಂಟೆ ಟ್ರೆಡ್‌ಮಿಲ್‌, ಕಾರ್ಡಿಯೊ ವ್ಯಾಯಾಮ ಮಾಡುತ್ತೇನೆ. ಅದರ ಹೊರತು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಆಹಾರ ತೆಗೆದುಕೊಳ್ಳುವುದಿಲ್ಲ.

* ನಿಮ್ಮ ತೂಕ, ಎತ್ತರ?

54 ಕೆ.ಜಿ., ಎತ್ತರ 5.7 ಅಡಿ

ಪ್ರತಿಕ್ರಿಯಿಸಿ (+)