ಶನಿವಾರ, ಡಿಸೆಂಬರ್ 7, 2019
25 °C

ಭಯೋತ್ಪಾದಕರ ದಾಳಿ: ಅಮರನಾಥ ಯಾತ್ರಿಕರ ಮೃತ ದೇಹ, ಗಾಯಾಳುಗಳು ಗುಜರಾತ್‌ಗೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಯೋತ್ಪಾದಕರ ದಾಳಿ: ಅಮರನಾಥ ಯಾತ್ರಿಕರ ಮೃತ ದೇಹ, ಗಾಯಾಳುಗಳು ಗುಜರಾತ್‌ಗೆ

ಶ್ರೀನಗರ, ಸೂರತ್‌: ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯಲ್ಲಿ ಸಾವಿಗೀಡಾದವರ ಮೃತದೇಹಗಳು ಹಾಗೂ ಗಾಯಗೊಂಡವರನ್ನು ಗುಜರಾತ್‌ನ ಸೂರತ್‌ಗೆ ವಿಮಾನದಲ್ಲಿ ಕರೆತರಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಈ ನಡುವೆ ದಾಳಿ ಸಂಬಂಧ ಜಮ್ಮು ಕಾಶ್ಮೀರ ಸರ್ಕಾರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ನೇತೃತ್ವದಲ್ಲಿ ವಿಶೇಷ ಸಭೆ ಕರೆದಿದೆ.

ಪರಿಹಾರ ಘೋಷಣೆ: ಘಟನೆಯಲ್ಲಿ ಮೃತಪಟ್ಟ ಯಾತ್ರಾರ್ಥಿಗಳ ಕುಟುಂಬಕ್ಕೆ ತಲಾ ಚ, ಗಾಯಾಳುಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡುವುದಾಗಿ ಜಮ್ಮು ಕಾಶ್ಮೀರ ಸರ್ಕಾರ ಘೋಷಿಸಿದೆ.

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್‌ನ ಮೇಲೆ ಸೋಮವಾರ ರಾತ್ರಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮಹಿಳೆಯರು ಸೇರಿದಂತೆ ಗುಜರಾತ್‌ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ರಾತ್ರಿ 8.20ಕ್ಕೆ ದಾಳಿ ನಡೆದಿದೆ.

ಪ್ರತಿಕ್ರಿಯಿಸಿ (+)