ಶುಕ್ರವಾರ, ಡಿಸೆಂಬರ್ 13, 2019
20 °C

ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ಜಿಎಸ್‌ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ಜಿಎಸ್‌ಟಿ

ಕೇಂದ್ರ ಸರ್ಕಾರಕ್ಕೆ  ಹೆಣ್ಣು ಮಕ್ಕಳ ಮೇಲೆ ನಿಜವಾದ  ಕಾಳಜಿ ಇದ್ದಲ್ಲಿ, ಸ್ಯಾನಿಟರಿ ಪ್ಯಾಡ್‌ಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು.ಈಗಾಗಲೇ ದೇಶದ ಶೇ 68 ಮಹಿಳೆಯರು ಇವುಗಳ ಬೆಲೆ ಕೈಗೆಟುಕದೇ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶೇ 23ರಷ್ಟು ಹೆಣ್ಣುಮಕ್ಕಳು ದೇಹದ ಋತುಚಕ್ರ ಪ್ರಕ್ರಿಯೆ ಆರಂಭವಾದ ನಂತರ ಶಾಲೆಯಿಂದ ಹಿಂದೆ ಸರಿಯುತ್ತಾರೆ. ಹೆಣ್ಣುಮಕ್ಕಳ ಆರೋಗ್ಯ ಕಾಪಾಡಲು ಬೇಕಾದ ಸ್ಯಾನಿಟರಿ ಪ್ಯಾಡ್‌ಗಳು ಅತ್ಯಗತ್ಯ ವಸ್ತುವೇ ಹೊರತು ಐಷಾರಾಮಿ ವಸ್ತು ಅಲ್ಲ.

-ನಿರ್ಮಲ ಎಚ್‌.ಎಲ್‌., ಹೊಳವನಹಳ್ಳಿ

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ವಿಧಿಸಿರುವ ತೆರಿಗೆ ಕುರಿತಾಗಿ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ನಾವಿಲ್ಲಿ ಒಂದು ವಿಷಯ ಮರೆಯುತ್ತಿದ್ದೇವೆ. ಸಕಲವೂ ಸಮಾನವಾಗಿರಬೇಕೆಂದು ಬೊಬ್ಬೆ ಹೊಡೆಯುತ್ತಿದ್ದೇವೆ. ಈ ಕಾರಣಕ್ಕೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ದುಬಾರಿ ಎನಿಸಿದಲ್ಲಿ ನಮ್ಮ ದೇಸಿ ಸ್ಟೈಲ್ ಯಾಕೆ ಅನುಸರಿಸಬಾರದು? ಬಟ್ಟೆಗಳನ್ನು ಬಳಸುತ್ತಾ ಸ್ವಚ್ಛವಾಗಿ ಡೆಟಾಲ್ ಹಾಕಿ ಒಗೆದು ಇಸ್ತ್ರಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮೂಲಕ ನಾವೆಲ್ಲಾ  ಗಾರ್ಬೇಜ್ ಡಂಪಿಂಗ್ ಸ್ಟೇಷನ್ ಆಗುವುದನ್ನು ತಡೆಯೋಣ.

-ರಾಜೇಶ್ವರಿ. ಸು.ರ., ನಂಜಪ್ಪ ಲೇಔಟ್, ರಾಜರಾಜೇಶ್ವರಿ ನಗರ

ನ್ಯಾಪ್‌ಕಿನ್‌ ಮೇಲಿನ ತೆರಿಗೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಮಹಿಳೆಯರ ಶಾಪ ತಟ್ಟುತ್ತದೆ.

-ಪ್ರವೀಣ್  ಮಡಿವಾಳ, ಮಾರುತಿನಗರ, ಹೆರೋಹಳ್ಳಿ ಕ್ರಾಸ್ಕೇಂದ್ರಕ್ಕೆ ಹೆಣ್ಣುಮಕ್ಕಳ ಮೇಲೆ ಇರುವ ಗೌರವವನ್ನು ಮತ್ತು ಕಾಳಜಿಯನ್ನು ಇದು ಎತ್ತಿ ತೋರಿಸುತ್ತಿದೆ. ಸರ್ಕಾರಕ್ಕೆ ನಿಜವಾಗಿ ಮಹಿಳೆಯರ ಬಗ್ಗೆ ಕಾಳಜಿ ಇದ್ದಲ್ಲಿ ನ್ಯಾಪ್‌ಕಿನ್‌ ಮೇಲೆ ತೆರಿಗೆ ಇರಲೇಕೂಡದು.

-ವರ್ಷಾ ಪಿ.ಎನ್‌., ಕಸ್ತೂರಿ ಬಾ ನಗರ, ಮೈಸೂರು ರಸ್ತೆಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮಹಿಳೆಯ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಇದರ ಮೇಲೆ ಜಿಎಸ್‌ಟಿ ವಿಧಿಸಬಾರದು. ಮಹಿಳೆಯರಿಗೆ ಕಷ್ಟವಾಗಬಹುದು.

-ದಿಶಾ ಬ್ಯಾಕೋಡ,ಎಲ್ಲಾ ಕಷ್ಟಗಳು ಹೆಣ್ಣುಮಕ್ಕಳಿಗೆ ಎಂಬುದು ಸಾಬೀತಾಗುತ್ತಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ನೀಡಬೇಕು

-ಕೆ.ಎಸ್‌ ಹೇಮಲತಾ ರೇವಣ್ಣ, ರಾಜಾಜಿನಗರನಗರ ಪ್ರದೇಶದಲ್ಲಿರುವ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಕೊಳ್ಳಲು ಕಷ್ಟವಾಗಲಾರದು. ಆದರೆ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಖರೀದಿಸಲು ಕಷ್ಟವಾಗುತ್ತದೆ. ಅವರು ಮತ್ತೆ ವಾಪಸ್‌ ಬಟ್ಟೆ ಬಳಸಲು ಆರಂಭಿಸಬಹುದು. ಅವರಲ್ಲಿ ಸ್ವಚ್ಛತೆ ಬಗ್ಗೆ ಕಡಿಮೆ ಜ್ಞಾನ ಇರುವುದರಿಂದ ರೋಗಗಳು ಬರಬಹುದು. ಹೀಗಾಗಿ ಮಹಿಳೆಯರ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿಯಿಂದ ಪ್ಯಾಡ್‌ಗಳನ್ನು ಮುಕ್ತಗೊಳಿಸಬೇಕು.

-ಜಯಂತ ಚಂದ್ರಶೇಖರ

ಪ್ರತಿಕ್ರಿಯಿಸಿ (+)