ಶುಕ್ರವಾರ, ಡಿಸೆಂಬರ್ 6, 2019
17 °C

‘ಹೊಡಿ ಒಂಬತ್’ ವೈರಲ್ ಆಯ್ತು

Published:
Updated:
‘ಹೊಡಿ ಒಂಬತ್’ ವೈರಲ್ ಆಯ್ತು

ನಟ ಗಣೇಶ್‌ ಅಭಿನಯದ ‘ಮುಗುಳು ನಗೆ’ ಸಿನಿಮಾದ ‘ಹೊಡಿ ಒಂಬತ್ ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದೆ.

‘ಮುಗುಳು ನಗೆ’ ಚಿತ್ರತಂಡ ಜೂನ್ 9ರಂದು ಈ ಹಾಡನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ನಾಲ್ಕು ನಿಮಿಷ ಒಂದು ಸೆಕೆಂಡ್ ಅವಧಿಯ ಈ ಹಾಡನ್ನು ಇದುವರೆಗೆ ಒಂದೂವರೆ ಲಕ್ಷ ಮಂದಿ ವೀಕ್ಷಿಸಿದ್ದು, 40 ಸಾವಿರ ಜನ ಲೈಕ್ ಒತ್ತಿದ್ದಾರೆ.

ನಿರ್ದೇಶಕ ಯೋಗರಾಜ್‌ ಭಟ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದು, ‘ಹೊಡಿ ಒಂಬತ್ ’ ಹಾಡನ್ನು ಅವರೇ ಬರೆದಿದ್ದಾರೆ. ಗಾಯಕ ವಿಜಯ ಪ್ರಕಾಶ್‌ ಹಾಡಿರುವ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಹಾಡಿನ ವೀಕ್ಷಣೆಗೆ ಕೊಂಡಿ: http://bit.ly/2tJdS64

ಪ್ರತಿಕ್ರಿಯಿಸಿ (+)