ಭಾನುವಾರ, ಡಿಸೆಂಬರ್ 15, 2019
23 °C

ಸೇನಾ ಸಮವಸ್ತ್ರದಲ್ಲಿ ಡಯಾನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಸಮವಸ್ತ್ರದಲ್ಲಿ ಡಯಾನಾ

ಡಯಾನಾ ಪೆಂಟಿ ಅಭಿನಯದ ಹಿಂದಿ ಚಿತ್ರ 'ಪರಮಾಣು' ಫಸ್ಟ್‌ ಲುಕ್‌ ಅನಾವರಣಗೊಂಡಿದೆ. ಈ ಚಿತ್ರದಲ್ಲಿ ಡಯಾನಾ ಭಾರತೀಯ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಹುಟ್ಟಿಸಿದೆ. ಡಯಾನಾ ಜತೆ ಜಾನ್ ಅಬ್ರಹಾಂ ಕೂಡಾ ಸೇನಾ ಸಮವಸ್ತ್ರದಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಜಸ್ಥಾನದಲ್ಲಿ 1998ರಲ್ಲಿ ನಡೆದ ಪೋಖ್ರಾನ್‌ ಪರಮಾಣು ಪರೀಕ್ಷೆ ಬಗೆಗಿನ ಸಿನಿಮಾ ಇದಾಗಿದ್ದು, ಬಹು ದಿನಗಳ ನಂತರ ಡಯಾನಾ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

’ಪರಮಾಣು ಚಿತ್ರದ ಫಸ್ಟ್‌ ಲುಕ್‌ನ ಚಿತ್ರಗಳನ್ನು ಅನಾವರಣ ಮಾಡುತ್ತಿರುವುದಕ್ಕೆ ಅತೀವ ಖುಷಿಯಾಗುತ್ತಿದೆ’ ಎಂದು ಡಯಾನಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಭಾರತೀಯ ಸೇನಾ ಸಮವಸ್ತ್ರದಲ್ಲಿರುವ ಚಿತ್ರಗಳ‌ನ್ನೂ ಡಯಾನಾ ಶೇರ್ ಮಾಡಿಕೊಂಡಿದ್ದಾರೆ.

ಅಭಿಷೇಕ್‌ ಶರ್ಮಾ ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್‌ 8ಕ್ಕೆ ತೆರೆಕಾಣಲಿದೆ.

ಡಯಾನಾ ಅವರಿಗೆ ‘ಕಾಕ್‌ಟೇಲ್‌’ ಚಿತ್ರ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸಿನಿಮಾ. ಈ ಚಿತ್ರದಲ್ಲಿ ಸೈಫ್‌ ಅಲಿಖಾನ್‌ ಅವರೊಂದಿಗೆ ಡಯಾನಾ ನಟಿಸಿದ್ದರು.

ಪ್ರತಿಕ್ರಿಯಿಸಿ (+)