ಶನಿವಾರ, ಡಿಸೆಂಬರ್ 14, 2019
25 °C

ರಾಮ ಮಂದಿರ ಕಟ್ಟಿಯೇ ಸಿದ್ಧ: ಕೇಂದ್ರ ಸಚಿವ

ಪಿಟಿಐ Updated:

ಅಕ್ಷರ ಗಾತ್ರ : | |

ರಾಮ ಮಂದಿರ ಕಟ್ಟಿಯೇ ಸಿದ್ಧ: ಕೇಂದ್ರ  ಸಚಿವ

ಕೋಲ್ಕತ್ತ: ‘ರಾಮ ಮಂದಿರ ನಿರ್ಮಾಣವು ಭಾರತದ ಕೋಟ್ಯಂತರ ‘ರಾಮ ಭಕ್ತರ’ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ನ್ಯಾಯಾಲಯದ ಆದೇಶದ ಅನುಸಾರ ಅಥವಾ ಒಮ್ಮತ ಪಡೆಯುವ ಮೂಲಕ ರಾಮ ಮಂದಿರ ನಿರ್ಮಿಸುವುದು ಖಚಿತ’ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಹೇಳಿದರು. ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡ ಅವರು, ‘ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ನಿಲುವು ಸ್ಪಷ್ಟವಾಗಿದೆ’ ಎಂದರು.

ಹಿಂದುಳಿದ ಪಶ್ಚಿಮ ಬಂಗಾಳ: ಇದೇ ವೇಳೆ, ಉತ್ತರ 24 ಪರಗಣ ಜಿಲ್ಲೆಯ ಬಸೀರ್‌ಹಾಟ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗೆ ಸಂಬಂಧಿಸಿ  ಪಶ್ಚಿಮ ಬಂಗಾಳ ಸರ್ಕಾರವನ್ನು ಅವರು ಟೀಕಿಸಿದರು.

‘ಪಶ್ಚಿಮ ಬಂಗಾಳವು ಮಹಾನ್ ಚಿಂತಕರು ಹುಟ್ಟಿದ ಜಾಗ. . ದೇಶದ ಮುಂಚೂಣಿ ರಾಜ್ಯವಾಗಬೇಕಿದ್ದ ಪಶ್ಚಿಮ ಬಂಗಾಳವು, ಸ್ವಾತಂತ್ರ್ಯ ಸಿಕ್ಕ ಎಪ್ಪತ್ತು ವರ್ಷಗಳ ನಂತರವೂ ಬೇರೆ ರಾಜ್ಯಗಳಿಗಿಂತ ಹಿಂದುಳಿದಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)