ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಹೂತಿಟ್ಟಿದ್ದ ಅಂಚೆ ನೌಕರ!

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಹನೂರು: ಅಂಚೆ ಮೂಲಕ ಬಂದಿದ್ದ ಆಧಾರ್, ಎಟಿಎಂ ಕಾರ್ಡ್‌ ಇನ್ನಿತರ ದಾಖಲೆಗಳನ್ನು ಅಂಚೆ ಇಲಾಖೆ ನೌಕರನೊಬ್ಬ ಹೂತಿಟ್ಟಿದ್ದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

ಸಮೀಪದ ಲೊಕ್ಕನಹಳ್ಳಿ ಗ್ರಾಮದಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ಅಂಚೆ ಕಚೇರಿ ಮುಂಭಾಗ ರಸ್ತೆ ಬದಿಯ ನಿವೇಶನವೊಂದರಲ್ಲಿ ಗುಂಡಿ ತೆಗೆದು ಹೂತಿಡಲಾಗಿತ್ತು. ಗ್ರಾಮಸ್ಥರೊಬ್ಬರು ಮನೆ ನಿರ್ಮಿಸಲು ತಳಪಾಯ ತೆಗೆಸುವಾಗ ಹೂತ್ತಿಟ್ಟಿದ್ದ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳು ಯಾವ ಅವಧಿಯಲ್ಲಿ ಬಂದಿದ್ದವು ಹಾಗೂ ಕೃತ್ಯ ಎಸಗಿದ ಸಿಬ್ಬಂದಿ ಯಾರು ಎಂಬುದು ಸದ್ಯ ತಿಳಿದುಬಂದಿಲ್ಲ.

ಅಂಚೆ ಇಲಾಖೆಯ ಈ ಕಚೇರಿ ವ್ಯಾಪ್ತಿಗೆ ಲೊಕ್ಕನಹಳ್ಳಿ, ಕೌಳ್ಳಿಹಳ್ಳ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನಕೂಬೆ ಗ್ರಾಮಗಳು ಬರುತ್ತವೆ.
ಪ್ರತಿಭಟನೆ: ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯ. ಇಲಾಖೆ ನೌಕರನ ಕೃತ್ಯದಿಂದಾಗಿ ನಾಗರಿಕರಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಸಮಗ್ರ ಮಾಹಿತಿ ಪಡೆದು, ಕರ್ತವ್ಯಲೋಪ ಎಸಗಿದ ನೌಕರನನ್ನು ಪತ್ತೆ ಹಚ್ಚಿ, ಕ್ರಮ ಜರುಗಿಸಲಾಗುವುದು ಎಂದು ನಂಜನಗೂಡು ಅಂಚೆ ಇಲಾಖೆ ಅಧೀಕ್ಷಕ ಶ್ರೀನಿವಾಸ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT