ಭಾನುವಾರ, ಡಿಸೆಂಬರ್ 8, 2019
21 °C

ಇಲಿ ಜ್ವರ ಶಂಕೆ: ಪಿಯು ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲಿ ಜ್ವರ ಶಂಕೆ: ಪಿಯು ವಿದ್ಯಾರ್ಥಿ ಸಾವು

ಬೆಳ್ತಂಗಡಿ: ಇಲ್ಲಿನ ಕಾಯರ್ತಡ್ಕ ಗ್ರಾಮದ ಮರಕ್ಕಡ ಮನೆಯ ಆನಂದ ಗೌಡರ ಮಗ ವೆಂಕಟೇಶ್ (17) ಶಂಕಿತ ಇಲಿ ಜ್ವರದಿಂದ ಮಂಗಳವಾರ ಮೃತಪಟ್ಟಿದ್ದಾನೆ.

ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಯಾಗಿರುವ ಈತ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಸೋಮವಾರ ಜ್ವರ ವಿಪರೀತವಾದ ಕಾರಣ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾನ್ಯ ಕಿಡ್ನಿ ಸಮಸ್ಯೆಯೂ ಈತನಿಗೆ ಇತ್ತು. ಅದರ ಜತೆಗೆ ಇಲಿ ಜ್ವರವೂ ಕಾಣಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದ ಎಂದು ಹೇಳಲಾಗಿದೆ.

‘ಇಲಿ ಜ್ವರದಿಂದಲೇ ಸಾವು ಸಂಭವಿಸಿದ ಬಗ್ಗೆ ಇದುವರೆಗೆ ವರದಿ ಬಂದಿಲ್ಲ. ಆದರೆ ಈ ಬಗ್ಗೆ ಶಂಕೆ ಇದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ

ಡಾ.ಕಲಾ ಮಧು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)