ಬುಧವಾರ, ಡಿಸೆಂಬರ್ 11, 2019
26 °C

ಅಂತರ್ಜಾಲದಲ್ಲಿ ಇಸ್ಪೀಟ್ ಆಡುವುದು ಅಪರಾಧ

ಪಿಟಿಐ Updated:

ಅಕ್ಷರ ಗಾತ್ರ : | |

ಅಂತರ್ಜಾಲದಲ್ಲಿ ಇಸ್ಪೀಟ್ ಆಡುವುದು ಅಪರಾಧ

ಹೈದರಾಬಾದ್: ಅಂತರ್ಜಾಲದಲ್ಲಿ ರಮ್ಮಿ (ಇಸ್ಪೀಟ್) ಆಡುವುದರಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು ತಡೆಯುವುದಕ್ಕಾಗಿ ತೆಲಂಗಾಣ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಈ ಆಟದ ದುಷ್ಪರಿಣಾಮಗಳನ್ನು ತಡೆಯುವುದು ಅತ್ಯವಶ್ಯವೆಂದು ಪರಿಗಣಿಸಿ ‘ತೆಲಂಗಾಣ ಗೇಮಿಂಗ್ ಆ್ಯಕ್ಟ್–1974’ಗೆ ತಿದ್ದುಪಡಿ ತಂದು ಜುಲೈ 8ರಂದು ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನ, ಮುಖ್ಯವಾಗಿ ಯುವಜನ ಈ ಆಟದ ಚಟಕ್ಕೆ ಬಿದ್ದಿರುವುದರಿಂದ ಅವರ ಕೌಟುಂಬಿಕ ಜೀವನದ ಮೇಲೆ ದುಷ್ಪರಿಣಾಮ ಉಂಟಾಗಿರುವುದನ್ನು ಗಮನಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಅಂತರ್ಜಾಲದ ಮೂಲಕ ರಮ್ಮಿ ಆಡುವುದು ಅಪರಾಧ ಎಂದೂ ಪರಿಗಣಿಸಲಾಗಿದೆ.

‘ರಮ್ಮಿ ಕೌಶಲ ಆಧರಿತ ಆಟವಲ್ಲ. ಇದು ಅರ್ಧ ಕೌಶಲ, ಇನ್ನರ್ಧ ಅದೃಷ್ಟವನ್ನು ಆಧರಿಸಿದೆ’ ಎಂದು ಹೇಳಿದ್ದ ಸರ್ಕಾರ, ಜೂನ್ 17ರಂದು ಈ ಕಾಯ್ದೆಗೆ ಮೊದಲ ತಿದ್ದುಪಡಿ ತಂದಿತ್ತು.

ಪ್ರತಿಕ್ರಿಯಿಸಿ (+)