ಸೋಮವಾರ, ಡಿಸೆಂಬರ್ 16, 2019
18 °C

ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ನೂತನ ಏಕದಿನ ರ‍್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ ಸರಣಿ ಯಲ್ಲಿ 154 ರನ್ ದಾಖಲಿಸಿದ್ದ ಮಹೇಂದ್ರ ಸಿಂಗ್ ದೋನಿ ಮೂರು ಸ್ಥಾನಗಳಲ್ಲಿ ಬಡ್ತಿ ಪಡೆದು 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಸರಣಿಗಳಲ್ಲಿ ಭಾರತ 3–1ರಲ್ಲಿ ವೆಸ್ಟ್‌ಇಂಡೀಸ್ ಮೇಲೆ ಗೆಲುವು ದಾಖಲಿಸಿದರೆ, ಜಿಂಬಾಬ್ವೆ 3–2ರಲ್ಲಿ ಶ್ರೀಲಂಕಾ ಎದುರು ಜಯ ಗಳಿಸಿದೆ.

ಬ್ಯಾಟ್ಸ್‌ಮನ್‌, ಬೌಲರ್‌ ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಮೊದಲ  ಐದು ಸ್ಥಾನಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಆಗದಿರುವುದು ವಿಶೇಷ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌, ದಕ್ಷಿಣ ಆಫ್ರಿಕಾದ ಎ.ಬಿ ಡಿವಿಲಿಯರ್ಸ್‌,  ಇಂಗ್ಲೆಂಡ್‌ನ ಜೋ ರೂಟ್ ಮತ್ತು ಪಾಕಿಸ್ತಾನದ ಬಾಬರ್‌ ಅಜಮ್ ಅವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ  ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೆಸ್ಟ್‌ಇಂಡೀಸ್ ಸರಣಿಯಲ್ಲಿ ಹೆಚ್ಚು ರನ್ ದಾಖಲಿಸಿದ್ದ ಅಜಿಂಕ್ಯ ರಹಾನೆ 13 ಸ್ಥಾನಗಳಲ್ಲಿ ಏರಿಕೆ ಕಂಡಿದ್ದಾರೆ. ಇದರಿಂದಾಗಿ ಅವರು 23ನೇ ರ್‍ಯಾಂಕಿಂಗ್ ಸ್ಥಾನದಲ್ಲಿ ಇದ್ದಾರೆ.

ಪ್ರತಿಕ್ರಿಯಿಸಿ (+)