ಸೋಮವಾರ, ಡಿಸೆಂಬರ್ 9, 2019
24 °C

ಜೋಷ್ನಾಗೆ ಕ್ರೀಡಾಧಿಕಾರಿ ಹುದ್ದೆ

Published:
Updated:
ಜೋಷ್ನಾಗೆ ಕ್ರೀಡಾಧಿಕಾರಿ ಹುದ್ದೆ

ಚೆನ್ನೈ: ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿಣ್ಣಪ್ಪ ಅವರನ್ನು ತಮಿಳುನಾಡು  ಸರ್ಕಾರದ  ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕ್ರೀಡಾಧಿಕಾರಿಯಾಗಿ  ನೇಮಕ ಮಾಡಲಾಗಿದೆ.

ಮಂಗಳವಾರ  ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಜೋಷ್ನಾ ಅವರಿಗೆ ನೇಮಕಪತ್ರ ನೀಡಿದರು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಅಂತರರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಅವರು ನೌಕರಿಗಾಗಿ ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿರುವ ಸರ್ಕಾರವು ಕ್ರೀಡಾ ಮೀಸಲಾತಿ ನಿಯಮದಡಿಯಲ್ಲಿ ಅವರಿಗೆ ಉದ್ಯೋಗ ನೀಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೋಷ್ನಾ ಅವರು ಹೋದ ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್ ವೈಯಕ್ತಿಕ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಈಜಿಪ್ಟ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಕಾಮನ್‌ವೆಲ್ತ್‌  ಕ್ರೀಡಾಕೂಟದಲ್ಲಿ ಅವರು ದೀಪಿಕಾ ಪಳ್ಳಿಕಲ್ ಅವರ ಜೊತೆಗೂಡಿ ಮಹಿಳೆಯರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.

ಪ್ರತಿಕ್ರಿಯಿಸಿ (+)