ಶುಕ್ರವಾರ, ಡಿಸೆಂಬರ್ 13, 2019
16 °C

ಹಾಕಿ: ಭಾರತದ ವನಿತೆಯರಿಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಹಾಕಿ: ಭಾರತದ ವನಿತೆಯರಿಗೆ ನಿರಾಸೆ

ಜೊಹಾನ್ಸ್‌ಬರ್ಗ್‌: ಪರಿಣಾಮಕಾರಿ ಆಟ ಆಡಲು ವಿಫಲರಾದ ಭಾರತ ತಂಡದವರು ಮಹಿಳಾ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಟೂರ್ನಿಯ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಮಂಗಳವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ರಾಣಿ ರಾಂಪಾಲ್‌ ಬಳಗ 1–4 ಗೋಲುಗಳಿಂದ ಅಮೆರಿಕ ತಂಡಕ್ಕೆ ಮಣಿಯಿತು.

ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗೋಲು ರಹಿತ ಡ್ರಾ ಮಾಡಿಕೊಂಡಿದ್ದ ಭಾರತದ ವನಿತೆಯರು ಅಮೆರಿಕ ತಂಡಕ್ಕೆ ತಕ್ಕ ಪೈಪೋಟಿ ನೀಡಲು ವಿಫಲರಾದರು.

ಬಲಿಷ್ಠ ಆಟಗಾರ್ತಿಯರನ್ನು ಹೊಂದಿದ್ದ ಅಮೆರಿಕ ತಂಡ ಶುರುವಿ ನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿ ಯಾಯಿತು. ಈ ತಂಡ ಎರಡನೇ ನಿಮಿಷ ದಲ್ಲಿ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿ ಕೊಂಡಿತ್ತು. ಆದರೆ ಭಾರತದ ಗೋಲ್‌ ಕೀಪರ್‌ ಸವಿತಾ ಅವರು ಅಮೋಘ ರೀತಿಯಲ್ಲಿ ಎದುರಾಳಿ ಆಟಗಾರ್ತಿಯ ಪ್ರಯತ್ನವನ್ನು ವಿಫಲಗೊಳಿಸಿದರು.

ಇದರ ಬೆನ್ನಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ದೀಪ್‌ ಗ್ರೇಸ್‌ ಎಕ್ಕಾ ಕೈಚೆಲ್ಲಿದರು. ಬಳಿಕ ವಂದನಾ ಕಟಾರಿಯಾ ಅವರ ಗೋಲು ಗಳಿಕೆಯ ಪ್ರಯತ್ನವೂ ವಿಫಲವಾಯಿತು.

ಮೊದಲ ಕ್ವಾರ್ಟರ್‌ನ ಆಟ ಮುಗಿಯಲು ಎರಡು ನಿಮಿಷ ಬಾಕಿ ಇದ್ದಾಗ ಅಮೆರಿಕ ತಂಡ ಎರಡನೇ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಆದರೆ ಸವಿತಾ ಮತ್ತೊಮ್ಮೆ ಎದುರಾಳಿಗಳ ಪ್ರಯತ್ನಕ್ಕೆ ಅಡ್ಡಿಯಾದರು.

ಪ್ರತಿಕ್ರಿಯಿಸಿ (+)