ಸೋಮವಾರ, ಡಿಸೆಂಬರ್ 9, 2019
23 °C

ಅನುಪಮಾ ಪ್ರಶಸ್ತಿಗೆ ಎಚ್‌. ಗಿರಿಜಮ್ಮ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಪಮಾ ಪ್ರಶಸ್ತಿಗೆ  ಎಚ್‌. ಗಿರಿಜಮ್ಮ ಆಯ್ಕೆ

ಬೆಂಗಳೂರು:  ಕರ್ನಾಟಕ ಲೇಖಕಿಯರ ಸಂಘದ  ‘ಅನುಪಮಾ ಪ್ರಶಸ್ತಿ’ಗೆ ಸಾಹಿತಿ ಎಚ್‌. ಗಿರಿಜಮ್ಮ ಭಾಜನರಾಗಿದ್ದಾರೆ.

‘ಎಚ್‌.ಎಸ್‌. ಪಾರ್ವತಿ ಪ್ರಶಸ್ತಿ’ಗೆ ಗಾಯತ್ರಿ ನಾವಡ, ‘ಲೇಖಾ ದತ್ತಿ ಪ್ರಶಸ್ತಿ’ಗೆ ಕವಯತ್ರಿ ಎಚ್‌.ಸಿ. ಭುವನೇಶ್ವರಿ ಅವರ ‘ಅಕ್ಕಬಿಕ್ಕುತ್ತಾಳೆ’ ಕೃತಿ ಆಯ್ಕೆಯಾಗಿದೆ.

ಪ್ರಕಾಶಕಿಯರಿಗೆ ನೀಡುವ ‘ಪ್ರೇಮಾಭಟ್‌ ಮತ್ತು ಎ.ಎಸ್‌. ಭಟ್‌ ಪ್ರಶಸ್ತಿ’ಗೆ ಮಂಗಳೂರಿನ ಸಂದೀಪ ಪ್ರಕಾಶನದ ಇಂದಿರಾ ಹಾಲಂಬಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳು ಕ್ರಮವಾಗಿ ತಲಾ ₹ 25,000, ₹ 10,000, ₹ 8,000 ಮತ್ತು ₹ 5,000 ನಗದು ಮತ್ತು ಫಲಕಗಳನ್ನು ಒಳಗೊಂಡಿವೆ.

ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಪ್ರೊ. ಎಂ.ಎಚ್‌. ಕೃಷ್ಣಯ್ಯ, ಹೇಮಲತಾ ಮಹಿಷಿ, ಲಲಿತಾ ಸಿದ್ದಬಸವಯ್ಯ, ಟಿ. ಪದ್ಮಾ ಇದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)