ಶುಕ್ರವಾರ, ಡಿಸೆಂಬರ್ 6, 2019
19 °C

ಪೋಷಕರ ಮಡಿಲು ಸೇರಿದ ಮಾನಸಿಕ ಅಸ್ವಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋಷಕರ ಮಡಿಲು ಸೇರಿದ ಮಾನಸಿಕ ಅಸ್ವಸ್ಥರು

ಬೆಂಗಳೂರು: ಆಧಾರ್‌ಗೆ ನೀಡಿದ್ದ ಬೆರಳಚ್ಚು ಗುರುತಿನಿಂದಾಗಿ ಮೂವರು ಮಾನಸಿಕ ಅಸ್ವಸ್ಥರು ಮತ್ತೆ ತಮ್ಮ ಪೋಷಕರ ಮಡಿಲು ಸೇರಿದ್ದಾರೆ.

ಮಧ್ಯಪ್ರದೇಶದ ನರೇಂದ್ರ (20), ಜಾರ್ಖಂಡ್‌ನ ಓಂಪ್ರಕಾಶ್ (20), ಆಂಧ್ರದ ಬಾಲಾಜಿ ನಾಯಕ್ (18) ತವರಿಗೆ ಹಿಂತಿರುಗಿದವರು.

ಮಾನಸಿಕ ಅಸ್ವಸ್ಥರಾಗಿರುವ ಇವರು ಪೋಷಕರಿಂದ ತಪ್ಪಿಸಿಕೊಂಡು ಬೆಂಗಳೂರು ತಲುಪಿದ್ದರು. ಕೆಲ ವರ್ಷಗಳಿಂದ ಕಿದ್ವಾಯಿ ಬಳಿ ಇರುವ ಮಾನಸಿಕ ಅಸ್ವಸ್ಥ ಮಾನಸಿಕ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ಮಕ್ಕಳ ಆರೈಕೆ ಕೇಂದ್ರದಲ್ಲಿ ಭಾರತ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎ) ಬೆಂಗಳೂರು ಪ್ರಾದೇಶಿಕ ಕಚೇರಿಯು ಆಧಾರ್ ನೋಂದಣಿ ಅಭಿಯಾನ ಆರಂಭಿಸಿತ್ತು. ಬೆರಳಚ್ಚು ಗುರುತಿನಿಂದಾಗಿ ಇವರ ಹೆಸರಿನಲ್ಲಿ ಈಗಾಗಲೇ ಆಧಾರ್ ಕಾರ್ಡ್‌ ಇರುವ ಬಗ್ಗೆ ಗೊತ್ತಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೇಂದ್ರ ಪ್ರಾದೇಶಿಕ ಕಚೇರಿಗೆ ಪತ್ರ ಬರೆದು ಇವರ ವಿಳಾಸ ಹಾಗೂ ಪೋಷಕರ ಬಗ್ಗೆ ಪತ್ತೆ ಹಚ್ಚುವಂತೆ ಕೋರಿದ್ದರು.

‘ಕೇಂದ್ರ ಪ್ರಾದೇಶಿಕ ಕಚೇರಿಯಿಂದ ಬಂದ ಮಾಹಿತಿ ಆಧರಿಸಿ ಅಸ್ವಸ್ಥರ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ವಿಷಯ  ಮುಟ್ಟಿಸಿದೆವು. ಬಳಿಕ ನಗರಕ್ಕೆ ಕರೆಸಿಕೊಂಡು ಇವರನ್ನು ಅವರಿಗೆ ಒಪ್ಪಿಸಿದ್ದೇವೆ’ ಎಂದು ಮಕ್ಕಳ ಆರೈಕೆ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)