ಭಾನುವಾರ, ಡಿಸೆಂಬರ್ 8, 2019
21 °C

ಚಿತ್ರಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಾವಳಿ

1. ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ವಿಧಿಸಿರುವ ಶೇ 12 ರಷ್ಟು ಜಿಎಸ್‌ಟಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

2. ಕಾವೇರಿ ನೀರಿನ ಸೋರಿಕೆ (ಲೆಕ್ಕಕ್ಕೆ ಸಿಗದ ನೀರು) ತಡೆಯುವ ಯೋಜನೆಗಾಗಿ  ಜಲಮಂಡಳಿ ಮಲ್ಲೇಶ್ವರದ ಮಿಲ್ಕಿ ಕಾಲೊನಿಯ ರಸ್ತೆಯನ್ನು ಅಗೆದಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ

3. ಸಂಪಿಗೆ ರಸ್ತೆ ಹಾಗೂ ಡಾ. ರಾಜ್‌ಕುಮಾರ್‌ ರಸ್ತೆಯನ್ನು ಸಂಪರ್ಕಿಸುವ ಪುಟ್ಟಸ್ವಾಮಿ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. 10 ದಿನಗಳಾದರೂ ಕೆಲಸ ಪೂರ್ಣಗೊಂಡಿಲ್ಲ. ಇದರಿಂದಾಗಿ ಜನರು ರಸ್ತೆ ದಾಟಲು ಕಷ್ಟ ಪಡುತ್ತಿದ್ದಾರೆ

4. ಲಯನ್ಸ್‌ ಕ್ಲಬ್ ಜಿಲ್ಲೆ 317ಎ ಗಾಯನ ಸಮಾಜದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನೂತನ ಸದಸ್ಯರ ಪದಗ್ರಹಣ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಗವರ್ನರ್‌ ಜಿ.ಪಿ. ದಿವಾಕರ್‌ ಅವರು ನಿಕಟಪೂರ್ವ ಗವರ್ನರ್‌ ಪಿ.ಆರ್‌.ಎಸ್‌. ಚೇತನ್‌ ಅವರೊಂದಿಗೆ ಮಾತುಕತೆ ನಡೆಸಿದರು. ಲಯನ್ಸ್‌ ಪ್ರಮುಖರಾದ ನಾಗರತ್ನಾ ಮಂಜುನಾಥ್‌, ಗಾಯತ್ರಿ ಗಿರೀಶ್‌ ಮತ್ತು ಉಪ ಗವರ್ನರ್‌ ನಾಗರಾಜ್‌ ಭೈರಿ ಇದ್ದರು.

5. ನಗರದ ರೆಸಿಡೆನ್ಸಿ ರಸ್ತೆಯ ಬಿಷಪ್‌ ಕಾಟನ್‌ ಬಾಲಕರ ಶಾಲೆ ಬಳಿ ಮಂಗಳವಾರ ಕಂಡುಬಂದ ಸಂಚಾರ ದಟ್ಟಣೆ

–ಪ್ರಜಾವಾಣಿ ಚಿತ್ರಗಳು

ಪ್ರತಿಕ್ರಿಯಿಸಿ (+)