ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಹಂದಿ ಸಾಕಣೆ ಕೇಂದ್ರದ ನೀರು: ಗ್ರಾಮಸ್ಥರ ಆರೋಪ

Last Updated 11 ಜುಲೈ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಹೋಬಳಿ ಬಿಳಿಜಾಜಿ ಗ್ರಾಮದ ಕೆರೆಗೆ ಹಂದಿ ಸಾಕಣೆ ಕೇಂದ್ರದ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘71 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯು ಸಂಪೂರ್ಣ ಹಾಳಾಗಿದೆ. ಕಸವನ್ನು ತಂದು ಕೆರೆಯಂಗಳದಲ್ಲಿ  ಸುರಿಯಲಾಗುತ್ತಿದೆ. ಇದರಲ್ಲಿ ಹೂಳು ತುಂಬಿದ್ದು, ಜಾಲಿಮರಗಳು ಬೆಳೆದಿವೆ.  ಅವುಗಳನ್ನು ತೆರವುಗೊಳಿಸಬೇಕು. ಹೂಳು ತೆಗೆಯಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಎರಡು ವರ್ಷಗಳಿಂದ ಕೆರೆಯ ಸಮೀಪ ಹಂದಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಅದರ ಮಲ–ಮೂತ್ರವನ್ನು ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಕೆರೆಯ ನೀರು ಕಲುಷಿತಗೊಂಡಿದೆ.

ಈ ಭಾಗದಲ್ಲಿ ದುರ್ವಾಸನೆ ಬೀರುತ್ತಿದೆ’ ಎಂದು ಗ್ರಾಮದ ನಿವಾಸಿ ವೇಣುಗೋಪಾಲ್ ದೂರಿದರು. ‘ಕೆರೆಯ ಪಕ್ಕದಲ್ಲೇ ಎರಡು ಎಕರೆಯಲ್ಲಿ ನೀಲಿಗಿರಿಯನ್ನು ಬೆಳೆಯಲಾಗಿದೆ. ಇದರಿಂದ ಈ ಭಾಗದ ಅಂತರ್ಜಲಮಟ್ಟ ಕುಸಿತ ಉಂಟಾಗಿದೆ. ನೀಲಿಗಿರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಗೋವಿಂದರಾಜು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT