ಶುಕ್ರವಾರ, ಡಿಸೆಂಬರ್ 6, 2019
19 °C

ಭಾರತದ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ

Published:
Updated:
ಭಾರತದ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ

ಬ್ರಿಸ್ಟಲ್: ಮಹಿಳೆಯರ ಕ್ರಿಕೆಟ್‌ನಲ್ಲಿಯೇ ಅತ್ಯಂತ ಶಿಸ್ತಿನ ತಂಡ ಎಂದು ಕರೆಸಿಕೊಳ್ಳುವ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಎದುರು ಭಾರತ ತಂಡ ಮಂಗಳವಾರ ವಿಶ್ವಕಪ್‌ನ ಮಹತ್ವದ ಪಂದ್ಯ ಆಡಲಿದೆ.

ಭಾರತ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿತು. ಆಸ್ಟ್ರೇಲಿಯಾ  ಕೂಡ ನಾಲ್ಕು ಪಂದ್ಯಗಳ ಜಯದ ಬಳಿಕ  ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಎರಡೂ ತಂಡಗಳಿಗೂ ಸೆಮಿಫೈನಲ್‌ ತಲುಪಲು ಇದು ಮಹತ್ವದ ಪಂದ್ಯ ಎನಿಸಿದೆ.

ಪ್ರತಿಕ್ರಿಯಿಸಿ (+)