ಬುಧವಾರ, ಡಿಸೆಂಬರ್ 11, 2019
19 °C

ಚಳಿಗಾಲದ ಚೆಲುವು

Published:
Updated:
ಚಳಿಗಾಲದ ಚೆಲುವು

ಪ್ಯಾರಿಸ್‌ನಲ್ಲಿ ಈಗ ಹಿಮದ ಗಾಳಿ ತಣ್ಣನೆ ಮೈ ಕೊರೆವ ಸಮಯ. ಬದಲಾಗುವುದು ವಾತಾವರಣ ಮಾತ್ರವಲ್ಲ, ಬಟ್ಟೆಗಳೂ. ಜೊತೆಗೆ ಫ್ಯಾಷನ್ನೂ. ಈ ಫಾಲ್ ವಿಂಟರ್‌ ಸೀಸನ್‌ ಶುರುವಾಗುವ ಹೊತ್ತಿಗೆ ಅದಕ್ಕೆ ತಕ್ಕಂತೆ ಬಗೆ ಬಗೆ ಬಟ್ಟೆಗಳು ಉತ್ಪನ್ನಗೊಳ್ಳುತ್ತವೆ. ಈ ಬಾರಿಯೂ ಅಂಥದ್ದೇ ಉಡುಪುಗಳು ಸಜ್ಜಾಗಿವೆ. ಅವನ್ನು ಪ್ರದರ್ಶಿಸಲೆಂದೇ ರೂಪದರ್ಶಿಗಳೂ ವೇದಿಕೆಯಲ್ಲಿ ಸಜ್ಜಾಗಿದ್ದರು...

ಬೆಣ್ಣೆ ಮುದ್ದೆಗಳಂತೆ ಕಾಣುವ ಉದ್ದುದ್ದ ಉಡುಪುಗಳನ್ನು ತೊಟ್ಟು ರ್‍ಯಾಂಪ್ ತುಂಬಾ ಓಡಾಡುತ್ತಾ, ತಮ್ಮ ಹಿಂದಿಂದೆಯೇ ಬರುತ್ತಿದ್ದ ಬಟ್ಟೆಗಳನ್ನೂ ನಾಜೂಕಾಗಿ ನಿರ್ವಹಿಸುವುದು ರೂಪದರ್ಶಿಗಳಿಗೆ ಸವಾಲೇ ಬಿಡಿ.

ಬಿಳಿ ಮೋಡಗಳಂತೆ ಹಬ್ಬಿಕೊಂಡಿದ್ದ ತಿಳಿ ಗುಲಾಬಿ, ಕಂದು, ಬಿಳಿ ಗೌನ್‌ಗಳು ನೋಡುಗರ ಕಣ್ಣು ಕೋರೈಸಿದ್ದವು. ಅವರು ಹೋದತ್ತಲೇ ಕಂಡವರ ಚಿತ್ತವೂ ಹಿಂಬಾಲಿಸುತ್ತಿತ್ತು. ಇವಕ್ಕೆ ಜೊತೆಯಾಗಿದ್ದು ಟ್ರಾನ್ಸ್‌ಪರೆಂಟ್ ವಿನ್ಯಾಸಗಳು.

ಅರೆ, ಚಳಿಗಾಲದಲ್ಲಿ ಹೀಗೂ ಬಟ್ಟೆ ತೊಡಬಹುದಾ ಅನ್ನಿಸಿದ್ದು ಪರದೆಯಂತಿದ್ದ ಗೌನ್ ತೊಟ್ಟ ರೂಪದರ್ಶಿಯರನ್ನು ನೋಡಿ... ಗಾಳಿ ಮೈಒಳಗೆ ಸುಳಿದಾಡುವಂತೆ ರೂಪಿಸಿದ್ದ ಬಟ್ಟೆಗಳಿವು. ಚಳಿಗಾಲಕ್ಕೆಂದೇ ಇಂಥ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದು ವಿನ್ಯಾಸಕಿ ಗಿಯಾಂಬಟ್ಟಿಸ್ ವಾಲಿ.

ಪ್ರತಿಕ್ರಿಯಿಸಿ (+)